ಮತ್ತೆ ವಿವಾದ ಸೃಷ್ಠಿಸಿದ ಲಕ್ಷ್ಮಿ ಹೆಬ್ಬಾಳ್ಕರ್‌ : ಕನ್ನಡದ ಬದಲು ಮರಾಠಿಯಲ್ಲಿ ಸಾಧನಾ ಪುಸ್ತಕ ವಿತರಣೆ

ಬೆಳಗಾವಿ : ಕಾಂಗ್ರೆಸ್‌ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌ ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯುವ ಸಲುವಾಗಿ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದರ ಪುಸ್ತಕವನ್ನು ಮರಾಠಿ ಭಾಷೆಯಲ್ಲಿ ಮುದ್ರಿಸಿದ್ದಾರೆ.

ಕಾಂಗ್ರೆಸ್‌ ಪಕ್ಷ ಈ ಪುಸ್ತಕವನ್ನು ಕನ್ನಡ ಭಾಷೆಯಲ್ಲಿ ಮುದ್ರಿಸಿತ್ತು. ಆದರೆ ಮರಾಠಿ ಭಾಷೆಗಳಿಗಾಗಿ ಲಕ್ಷ್ಮಿ ಹೆಬ್ಬಾಳ್ಕರ್‌ ಮರಾಠಿ ಭಾಷೆಯಲ್ಲಿ ಪುಸ್ತಕ ರಚಿಸಿದ್ದು, ಬೆಳಗಾವಿ ಗ್ರಾಮೀಣ  ಮತ ಕ್ಷೇತ್ರದಲ್ಲಿ ಕನ್ನಡದ ಬದಲಾಗಿ ಮರಾಠಿ ಭಾಷೆಯ ಸಾದನಾ ಪುಸ್ತಕವನ್ನು ಹಂಚಿದ್ದಾರೆ. ಈ ಸಂಬಂಧ ಎಲ್ಲೆಡೆ ಮತ್ತೆ ಆಕ್ರೋಶ ವ್ಯಕ್ತವಾಗಿದೆ.

ಕೆಲ ದಿನಗಳ ಹಿಂದಷ್ಟೇ ಲಕ್ಷ್ಮಿ ಹೆಬ್ಬಾಳ್ಕರ್‌ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ನಾನೇ ಮೊದಲು ಜೈ ಎನ್ನುವೆ ಎಂದಿದ್ದು, ಭಾರೀ ಆಕ್ರೋಶ ಎದುರಾಗಿದ್ದು, ಈಗ ಮತ್ತೆ ಮರಾಠಿ ಭಾಷೆಗೆ ಒತ್ತು ನೀಡಿರುವ ಲಕ್ಷ್ಮಿ ವಿರುದ್ದ ಜನ ಸಿಡಿದೆದ್ದಿದ್ದಾರೆ.