ಮೈಸೂರ : ಸಿದ್ದರಾಮಯ್ಯ ವಿರುದ್ಧ JDS ತಂತ್ರ _ ಪ್ರಸಾದ್ ರನ್ನ 2ನೇ ಬಾರಿ ಭೇಟಿದ ನಾಯಕರು..

ಮೈಸೂರು: ಸಿ ಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆಸುವುದಾಗಿ ಹೇಳುತ್ತಿರುವ ಹಿನ್ನೆಲೆ ಸಿಎಂ ಮಣಿಸಲು ಜೆಡಿಎಸ್ ,ಬಿಜೆಪಿ ರಣತಂತ್ರ ರೂಪಿಸುತ್ತಿವೆ.

ಈ ನಡುವೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ವಿ ಶ್ರಿನಿವಾಸ್ ಪ್ರಸಾದ್ ನಿವಾಸಕ್ಕೆ ಜೆ ಡಿ ಎಸ್ ಮುಖಂಡರಾದ ಮಾಜಿ ಸಂಸದ ಹೆಚ್ ವಿಶ್ವನಾಥ್ ಹಾಗೂ ಶಾಸಕ ಜಿ ಟಿ ದೇವೇಗೌಡರು 2ನೇ ಭಾರಿಗೆ ಭೇಟಿ ನೀಡಿದ್ದಾರೆ.

ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಶ್ರೀನಿವಾಸ್ ಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿದ ಇಬ್ಬರು ಜೆಡಿಎಸ್ ನಾಐಕರು ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಗಷ್ಟೆ ಜೆಡಿಎಸ್ ಮುಖಂಡರಾದ ಜಿ.ಟಿ ದೇವೇಗೌಡ ಹಾಗೂ ಹೆಚ್. ವಿಶ್ವನಾಥ್ ಶ್ರೀನಿವಾಸ್ ಪ್ರಸಾದ್ ರನ್ನ ಭೇಟಿ ಮಾಡಿ ಚರ್ಚಿಸಿದ್ದರು. ಇದೀಗ ಮತ್ತೆ ಭೇಟಿಯಾಗಿದ್ದು, ಒಂದೇ ವಾರದಲ್ಲಿ ಎರಡು ಭಾರಿ ಚರ್ಚೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಜೆಡಿಎಸ್ ಮುಖಂಡರು ಜೆಪಿ ಚಳುವಳಿಯಲ್ಲಿದ್ದ ವಿ ಶ್ರೀನಿವಾಸ್ ಪ್ರಸಾದ್ ಅವರ ಬೆಂಬಲ ಕೇಳಿದ್ದೆವೆ. ಕೆಲದಿನಗಳ ನಂತರ ಜೆ ಡಿ ಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಚಸ್ವಾಮಿ ಪ್ರಸಾದ್ ಅವರನ್ನ ಭೇಟಿ ಮಾಡಿ ಮಾತನಾಡುತ್ತಾರೆ ಎಂದಿದ್ದಾರೆ.

One thought on “ಮೈಸೂರ : ಸಿದ್ದರಾಮಯ್ಯ ವಿರುದ್ಧ JDS ತಂತ್ರ _ ಪ್ರಸಾದ್ ರನ್ನ 2ನೇ ಬಾರಿ ಭೇಟಿದ ನಾಯಕರು..

  • October 20, 2017 at 9:46 PM
    Permalink

    i really hate it when my sebaceous gland are producing too much oil, it really makes my life miserable**

Comments are closed.

Social Media Auto Publish Powered By : XYZScripts.com