ದೇವರು, ಜನರ ಅನುಗ್ರಹ ಇದ್ದರೆ ಮುಂದಿನ ಸಿಎಂ HDK – ಭವಿಷ್ಯದ ಬಗ್ಗೆ ದೇವೇಗೌಡ ಅಭಿಪ್ರಾಯ

ಹಾಸನ: ಹೆಚ್.ಡಿ ಕುಮಾರಸ್ವಾಮಿ ಮುಂದಿನ ಸಿಎಂ‌. ಇಲ್ಲ ಕಿಂಗ್ ಮೇಕರ್ ಎಂದು ಭವಿಷ್ಯ ನುಡಿದಿರುವ ಬ್ರಹ್ಮಾಂಡ ಗುರೂಜಿ ಹೇಳಿಕೆಗೆ ಪ್ರತಿಕ್ರಿಯೆಸಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ದೇವರು, ಜನರ ಅನುಗ್ರಹ ಇದ್ದರೆ ಕುಮಾರಸ್ವಾಮಿ ಅಧಿಕಾರ ಹಿಡಿಯಬಹುದು ಎಂದು ನುಡಿದರು.

ಕುಟುಂಬ ಸಮೇತ ಹಾಸನಾಂಬೆ ದರ್ಶನ ಪಡೆದ ಬಳಿಕ ಮಾತನಾಡಿದ ದೇವೇಗೌಡರು, ಒಬ್ಬೊಬ್ಬರ ಭಾವನೆ, ನಂಬಿಕೆ ಒಂದು ರೀತಿ ಇರುತ್ತದೆ, ನಾನು ದೇವರು ಮತ್ತು ಜ್ಯೋತಿಷ್ಯ ವನ್ನು ನಂಬುತ್ತೇನೆ, ದೇವರ ಆಶೀರ್ವಾದ ಪಡೆದೇ ನನ್ನ ರಾಜಕೀಯ ಜೀವನ‌ ಆರಂಭಿಸಿದೆ, ದೇವರು, ಜನರ ಅನುಗ್ರಹ ಇದ್ದರೆ ಕುಮಾರಸ್ವಾಮಿ ಅಧಿಕಾರ ಹಿಡಿಯಬಹುದು, ಅದೆಲ್ಲಾ ದೈವೇಚ್ಛೆ, ನಾನೊಬ್ಬ ತಂದೆಯಾಗಿ ಮಗನ ಆರೋಗ್ಯ ಕಾಪಾಡಮ್ಮ ಎಂದು ಹಾಸಬಾಂಬೆಯಲ್ಲಿ ಬೇಡಿಕೊಂಡಿದ್ದೇನೆ ಎಂದರು.

ಸಿದ್ದರಾಮಯ್ಯ ಮರಳಿ ಜೆಡಿಎಸ್ ಗೆ ಬರೋ ವದಂತಿ, ಹಾಗೆಲ್ಲಾ ಲಘುವಾಗಿ ಯಾರೂ ಮಾತನಾಡಬೇಡಿ, ಅವರು ಜವಾಬ್ದಾರಿ ಸ್ಥಾನದಲ್ಲಿದ್ದಾರೆ, ಅವರ ನೇತೃತ್ವದಲ್ಲಿ ಮುಂದಿನ‌ ಚುನಾವಣೆ ನಡೆಯಬಹುದು ಎಂದು ಹೆಚ್.ಡಿಡಿ ಸ್ಪಷ್ಟನೆ ನೀಡಿದರು.

Comments are closed.