ಇನ್ನು ಮುಂದೆ ಇಂತಹ ತಪ್ಪು ಮಾಡಬೇಡಿ, ಮಾಡಿದರೆ ಜಿಯೋದ ಅನ್‌ಲಿಮಿಟೆಡ್‌ ಕಾಲ್ ದೊರೆಯುವುದಿಲ್ಲ…!

ದೆಹಲಿ : ರಿಲಾಯನ್ಸ್‌ ಜಿಯೋ ಮಾರುಕಟ್ಟೆ ಬಂದ ನಂತರ ಬೇರೆಲ್ಲಾ ಕಂಪನಿಗಳ ಕಷ್ಟ ಹೇಳತೀರದಾಗಿದೆ. ದೇಶದ ಮುಕ್ಕಾಲು ಭಾಗ ಜನ ಜಿಯೋ ಬಳಕೆ ಮಾಡುತ್ತಿದ್ದು, ಅನೇಕರು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಾರಣ ಜಿಯೋ ಕಂಪನಿ ಗ್ರಾಹಕರಿಗೆ ಶಾಕ್‌ ನೀಡಿದೆ.

ಇಷ್ಟು ದಿನ ಜಿಯೋ ಅನ್‌ಲಿಮಿಟೆಡ್‌ ಕರೆಯ ಆಫರ್ ನೀಡಿತ್ತು. ಆದರೆ ಇದನ್ನು ಕೆಲವರು ದುರುಪಯೋಗ ಪಡಿಸಿಕೊಂಡ ಕಾರಣ ಜಿಯೋ ಕಂಪನಿ ಈ ನಿರ್ಧಾರ ಕೈಗೊಂಡಿದೆ. ಕೆಲ ಖಾಸಗಿ ಕಂಪನಿಗಳು ತಮ್ಮ ವಾಣಿಜ್ಯಾತ್ಮಕ ಚಟುವಟಿಕೆಗಳಿಗಾಗಿ ಜಿಯೋ ಬಳಕೆ ಮಾಡುತ್ತಿದ್ದು, ಗ್ರಾಹಕರಿಗೆ ಕರೆ ಮಾಡಿ ತಮ್ಮ ಕಂಪನಿಗಳ ಆಫರ್ ಹೇಳುವುದು, ಮುಂತಾದ ಕೆಲಸ ಮಾಡುತ್ತಿವೆ. ಅಲ್ಲದೆ ಅದಕ್ಕಾಗಿ 10 ಗಂಟೆಗೂ ಅಧಿಕ ಸಮಯವನ್ನು ಜಿಯೋದಿಂದ ಕರೆ ಮಾಡಲು ಬಳಕೆ ಮಾಡುತ್ತಿದ್ದವು. ಇದರಿಂದಾಗಿ ಜಿಯೊ ಕಂಪನಿಗೆ ಪೆಟ್ಟು ಬಿದ್ದಿದ್ದು, ಈ ನಿರ್ಧಾರ ಕೈಗೊಂಡಿದೆ.

ಆದ್ದರಿಂದ ಜಿಯೋ  ಕರೆಗಳನ್ನು ದುರುಪಯೋಗ ಪಡಿಸಿಕೊಂಡವರಿಗೆ ಅನ್‌ಲಿಮಿಟೆಡ್‌ ಕಾಲ್‌ ಮಾಡಲು ತಡೆಯೊಡ್ಡಿದೆ. ಇಂತಹವರು ದಿನಕ್ಕೆ ಕೇವಲ 300 ನಿಮಿಷಗಳ ಕಾಲ ಮಾತ್ರ ಕರೆ ಮಾಡಬಹುದು ಎಂದು ಕಂಪನಿ ಹೇಳಿದೆ.

Comments are closed.

Social Media Auto Publish Powered By : XYZScripts.com