ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಶಬ್ದ ಬಳಿಕೆ : ವಿವಾದದಲ್ಲಿ ಸಚಿವ ರೋಷನ್ ಬೇಗ್ ….!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಬಗ್ಗೆ ವಾರ್ತಾ ಸಚಿವ ರೋಷನ್ ಬೇಗ್ ಅವಾಚ್ಯ ಶಬ್ದಗಳನ್ನ ಬಳಿಸಿ ವಿವಾದದಲ್ಲಿ  ಸಿಕ್ಕಿಹಾಕಿಕೊಂಡಿದ್ದಾರೆ.

ಮೂರು ದಿನಗಳ ಹಿಂದೆ ಪುಲಕೇಶಿ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಚಿವ ರೋಷನ್ ಬೇಗ್ ಬಿಜೆಪಿಯನ್ನ ಟೀಕಿಸುವ ಬರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಎಸ್ ಯಡಿಯೂರಪ್ಪ ಬಗ್ಗೆ ಅವಾಚ್ಯ ಶಬ್ದಗಳನ್ನ ಬಳಸಿದ್ದಾರೆ.

ಅಧಿಕಾರಕ್ಕೆ ಬಂದ ಬಳಿಕ ಎಲ್ಲರೂ ‘ನಮ್ಮ ಮೋದಿ ನಮ್ಮ ಮೋದಿ’ ಅಂತ ಹೊಗಳುತ್ತಿದ್ದರು. ಅಧಿಕಾರಕ್ಕೆ ಕೂಡಿಸಿದ ಜನರೇ ಈಗ ಮೋದಿಯನ್ನು ಶಪಿಸುತ್ತಿದ್ದಾರೆ. “ನೋಟ್ ಬ್ಯಾನ್ ಮಾಡಿದ ಮೇಲೆ ಏನಾಯ್ತು? ಜನರು………ಏನೆಲ್ಲಾ ಮಾಡಿಬಿಟ್ಟ’ ಎಂದು ಬೈಯುತ್ತಿದ್ದಾರೆ” ಎಂದು ರೋಷನ್ ಬೇಗ್ ನಾಲಿಗೆ ಹರಿಯ ಬಿಟ್ಟಿದ್ದಾರೆ.

ಅಲ್ಲದೆ ಕಾಂಗ್ರೆಸ್ ಪಕ್ಷ ಇಡೀ ಭಾರತ ದೇಶವನ್ನು ಅಭಿವೃದ್ಧಿಪಡಿಸಿತ್ತು. , ಅನ್ನಭಾಗ್ಯ, ಚಿಕ್ಕ ಮಕ್ಕಳಿಗೆ ಶಾಲೆಯಲ್ಲಿ ಹಾಲು ಕೊಡುವ ಕ್ಷೀರ ಭಾಗ್ಯ ಯೋಜನೆ, ಗರ್ಭಿಣಿಯರಿಗೆ ಬಿಸಿಯೂಟ ನೀಡುವ ಯೋಜನೆಯನ್ನ ಸಿಎಂ ಸಿದ್ದರಾಮಯ್ಯ ಕೊಟ್ಟಿದ್ದಾರೆ. ಆದ್ರೆ ಮೋದಿ ಇಂತಹ ಜನಪರ ಯೋಜನೆ ಮಾಡೋದು ಬಿಟ್ಟು, ಸುಮ್ಮನೆ ಮೈಕ್​ ಹಿಡ್ಕೊಂದು ಮನ್​ ಕಿ ಬಾತ್, ಮನ್​ ಕಿ ಬಾತ್​ ಅಂತ ಓಳ್​ ಬಿಡೋದೆಲ್ಲ ಬೇಡ,” ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಬಿ. ಎಸ್ ಯಡಿಯೂರಪ್ಪ ವಿರುದ್ದ ವಾಗ್ದಾಳಿ ನಡೆಸಿದ್ದ ಸಚಿವ ರೋಷನ್ ಬೇಗ್, ನಾವು 5 ರೂಪಾಯಿಗೆ ಬ್ರೇಕ್​ ಫಾಸ್ಟ್, 10 ರೂಪಾಯಿಗೆ ಊಟ ಕೊಡ್ತೀದ್ದೀವಿ. ನೀವ್ಯಾಕೆ ಇದನ್ನೆಲ್ಲ ಕೊಡಲಿಲ್ಲ? ಯಡಿಯೂರಪ್ಪ ಸಿಎಂ ಆಗಿದ್ದಾಗ ಜನರಿಗೆ ಇದೆನ್ನೆಲ್ಲ ಯಾಕೆ ಕೊಡಲಿಲ್ಲ? ಯಡಿಯೂರಪ್ಪ ಬರೀ ಶೋಭಾ ಕರಂದ್ಲಾಜೆ ನೋಡ್ಕೊಂಡು ನಿಂತಿದ್ದರು ಎಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

 

Social Media Auto Publish Powered By : XYZScripts.com