ಅಮೆರಿಕ ಆಯ್ತು, ಈಗ ಇಸ್ರೇಲ್‌ ಸರದಿ : ಯುನೆಸ್ಕೋದಿಂದ ಹೊರನಡೆದ ಉಭಯ ರಾಷ್ಟ್ರಗಳು

ವಾಷಿಂಗ್ಟನ್‌ : ಪಕ್ಷಪಾತ ಧೋರಣೆ ಹಿನ್ನೆಲೆಯಲ್ಲಿ ಯುನೆಸ್ಕೋದಿಂದ ಅಮೆರಿಕ ಹೊರನಡೆದಿದ್ದ ಬೆನ್ನಲ್ಲೇ ಇಸ್ರೇಲ್ ಸಹ ಹೊರನಡೆದಿದೆ. ಇದರಿಂದಾಗಿ ಯುನೆಸ್ಕೋಗೆ ವಿಶ್ವ ಸಮುದಾಯದ ಎದುರು ಭಾರೀ ಮುಖಭಂಗವಾದಂತಾಗಿದೆ.

ಈ ಕುರಿತು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೇತನ್ಯಾಹು ಪ್ರತಿಕ್ರಿಯೆ ನೀಡಿದ್ದು, ಪ್ಯಾರಿಸ್‌ ಮೂಲದ ವಿಶ್ವಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಹಾಗೂ  ಸಾಂಸ್ಕೃತಿಕ ಸಂಸ್ಥೆಯಾಗಿರುವ ಯುನೆಸ್ಕೋ ಇಸ್ರೇಲ್‌ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದು, ಮಲತಾಯಿ ಧೋರಣೆ ಅನುಸರಿಸುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ ಅಮೆರಿಕದ ನಡೆಗೆ ಮೆಚ್ಚು ಗೆ ವ್ಯಕ್ತಪಡಿಸಿದ್ದು, ಅಮೆರಿಕ ಈ ವಿಚಾರವಾಗಿ ದಿಟ್ಟ ನಿರ್ಧಾರ ಕೈಗೊಂಡಿದೆ. ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ನೇತನ್ಯಾಹು ಹೇಳಿದ್ದಾರೆ.

ಅಮೆರಿಕ ಯುನೆಸ್ಕೋದಿಂದ ಹೊರನಡೆಯಬಾರದಿತ್ತು. ಇದು ನಿಜಕ್ಕೂ ವಿಷಾದನೀಯ ವಿಷಯ ಎಂದು ಯುನೆಸ್ಕೋದ ನಿರ್ದೇಶಕ ಎರಿನಾ ಬೋಕೊವಾ ಹೇಳಿದ್ದಾರೆ.

 

 

One thought on “ಅಮೆರಿಕ ಆಯ್ತು, ಈಗ ಇಸ್ರೇಲ್‌ ಸರದಿ : ಯುನೆಸ್ಕೋದಿಂದ ಹೊರನಡೆದ ಉಭಯ ರಾಷ್ಟ್ರಗಳು

  • October 20, 2017 at 9:23 PM
    Permalink

    With havin so much content and articles do you ever run into any problems of plagorism or copyright violation? My site has a lot of unique content I’ve either authored myself or outsourced but it appears a lot of it is popping it up all over the web without my permission. Do you know any techniques to help stop content from being ripped off? I’d genuinely appreciate it.

Comments are closed.

Social Media Auto Publish Powered By : XYZScripts.com