ಕಲಾ ಪ್ರೇಮಿಗಳಿಗಾಗಿ ನಗರದಲ್ಲಿ 2 ದಿನಗಳ ಶಾಸ್ತ್ರೀಯ ನೃತ್ಯದ ರಸದೌತಣ : ‘ರಸಾಸ್ವಾದ’

ಕಲಾಸಕ್ತರಿಗಾಗಿ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಸೇವಾ ಸದನ ಸಭಾಭವನದಲ್ಲಿ ಅಕ್ಟೋಬರ್ 14 ಶನಿವಾರ ಹಾಗೂ 15 ಭಾನುವಾರದಂದು ‘ರಸಾಸ್ವಾದ’ ಹೆಸರಿನ ಎರಡು ದಿನಗಳ ನೃತ್ಯ ಉತ್ಸವ ಕಾರ್ಯಕ್ರಮವನ್ನು ‘ ಆಯೋಜಿಸಲಾಗಿದೆ. ಕಾರ್ಯಕ್ರಮ ಎರಡೂ ದಿನ ಸಾಯಂಕಾಲ 5.30 ರಿಂದ ಆರಂಭವಾಗಲಿದೆ. ದೇಶದ ಪ್ರಖ್ಯಾತ ನೃತ್ಯ ಕಲಾವಿದರು ಜನರನ್ನು ರಂಜಿಸಲು ಆಗಮಿಸುತ್ತಿದ್ದಾರೆ.

ರಸಾಸ್ವಾದ ಕಾರ್ಯಕ್ರಮದ ಮೊದಲ ದಿನ ಅಂದರೆ ಅಕ್ಟೋಬರ್ 14ರಂದು ಶನಿವಾರ ‘ ನೃತ್ಯಕಲಾಮಂದಿರಂ ‘ ತಂಡದವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ನೃತ್ಯಕಲಾಮಂದಿರಂ ತಂಡ ಹಿರಿಯ ಭರತನಾಟ್ಯ ಕಲಾವಿದೆ, ಗುರು ಬಿ ಭಾನುಮತಿ ಅವರಿಂದ ಮಾರ್ಗದರ್ಶನ ಪಡೆದಿದೆ.

ಬಳಿಕ ಯುವ ಓಡಿಸ್ಸಿ ನೃತ್ಯ ಕಲಾವಿದೆ ಹಾಗೂ ನೃತ್ಯ ಸಂಯೋಜಕಿ ಮಧುಲಿತಾ ಮೊಹಪಾತ್ರಾ ಅವರ ಮಾರ್ಗದರ್ಶನದಲ್ಲಿ ‘ ನೃತ್ಯಾಂತರ ನಾಟ್ಯ ತಂಡ ‘ ದವರಿಂದ ಓಡಿಸ್ಸಿ ನೃತ್ಯ ಪ್ರದರ್ಶನ ನಡೆಯಲಿದೆ. ‘ ನೃತ್ಯಾಂತರ ನಾಟ್ಯ ತಂಡ ‘ ದೇಶಾದ್ಯಂತ ಹೆಸರಾಗಿರುವ ನಾಟ್ಯ ಸಮೂಹವಾಗಿದೆ. ನಂತರ ಖ್ಯಾತ ಕಥಕ್ ನೃತ್ಯ ಕಲಾವಿದರಾದ ಶ್ರೀ ಮುರಳಿ ಮೋಹನ ಕಾಲ್ವಾ ಹಾಗೂ ಶ್ರೀಮತಿ ನಂದಿನಿ ಮೆಹ್ತಾ ಅವರ ಮಾರ್ಗದರ್ಶನದ ‘ನಾದಂ ನಾಟ್ಯ ಸಮೂಹ‘ ದವರಿಂದ ಕಥಕ್ ನೃತ್ಯ ಪ್ರದರ್ಶನ ನಡೆಯಲಿದೆ.

ರಸಾಸ್ವಾದದ ಎರಡನೇ ದಿನ ಅಂದರೆ ಅಕ್ಟೋಬರ್ 15 ರಂದು ಭಾನುವಾರ ಯುವ ಪುರುಷ ನೃತ್ಯ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. contemporary (ಸಮಕಾಲೀನ) ನೃತ್ಯ ಕಲಾವಿದರಾದ ಜನಾರ್ಧನ ಅರಸ್ ಅವರಿಂದ ನಾಟ್ಯ ಪ್ರದರ್ಶನ ಜನರನ್ನು ರಂಜಿಸಲಿದೆ. ಖ್ಯಾತ ಭರತನಾಟ್ಯ ಕಲಾವಿದ ಪ್ರಶಾಂತ್ ಶಾಸ್ತ್ರಿ ಅವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ. ಹಿರಿಯ ಓಡಿಸ್ಸಿ ಕಲಾವಿದ ಕೋಲ್ಕತ್ತಾದ ರಾಜೀಬ್ ಭಟ್ಟಾಚಾರ್ಯ ಅವರು ತಮ್ಮ ವಿಭಿನ್ನ ಹಾಗೂ ವಿಶಿಷ್ಟ ಅಬಿನಯದ ಮೂಲಕ ಪ್ರೇಕ್ಷಕರ ಮನಸೆಳೆಯಲಿದ್ದಾರೆ. ಬೆಂಗಳೂರಿನ ಉದಯೋನ್ಮುಖ ಕಥಕ್ ಕಲಾವಿದರಾದ ನಿಧಗ್ ಕರುನಾಡ್ ಅವರು ತಮ್ಮ ಸಂಕೀರ್ಣ ಪಾದಚಲನೆಯಿಂದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ನಗರದ ಎಲ್ಲ ಕಲಾಸಕ್ತರೂ ‘ರಸಾಸ್ವಾದ’ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಯೋಜಕರ ವತಿಯಿಂದ ಕೋರಲಾಗಿದೆ.

ಸ್ಥಳ : ಸೇವಾ ಸದನ ಆಡಿಟೋರಿಯಂ, ಮಲ್ಲೇಶ್ವರಂ 14ನೇ ಕ್ರಾಸ್, ಬೆಂಗಳೂರು.

Comments are closed.

Social Media Auto Publish Powered By : XYZScripts.com