ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಸಾವಿಗೀಡಾದ ತಾಯಿ

ಕಲಬುರಗಿ : ಮಗನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ತಾಯಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ಕಲಬುರಗಿಯ ಸುಲ್ತಾನ್‌ಪುರದಲ್ಲಿ ನಡೆದಿದೆ. ಮೃತ ಮಹಿಳೆ ಲಲಿತಾಬಾಯಿ (70) ಎಂದು ತಿಳಿದುಬಂದಿದೆ.

ಲಲಿತಾಬಾಯಿ ಅವರ ಮಗ ಮೋನಪ್ಪ ಎಂಬುವವರನ್ನು ಇತ್ತೀಚೆಗಷ್ಟೇ ದುಷ್ಕರ್ಮಿಗಳು ಅಪಹರಿಸಿದ್ದರು. ಬಳಿಕ ಆರು ಲಕ್ಷಕ್ಕಾಗಿ ಬೇಡಿಕೆ ಇಟ್ಟಿದ್ದು, ಅಷ್ಟೂ ಹಣ ಪಡೆದಿದ್ದರು. ಆದರೆ ಹಣ ಪಡೆದ ಬಳಿಕ ಮೋನಪ್ಪನನ್ನು ಬಿಡದೆ ಹತ್ಯೆ ಮಾಡಿ ಎಸೆದಿದ್ದಾರೆ.

ಚಿಂಚೋಳಿ, ನರೋಣ ಮಧ್ಯೆ ಮೋನಪ್ಪ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದರು. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

 

Comments are closed.

Social Media Auto Publish Powered By : XYZScripts.com