ಲಿಟಲ್ ಮಿಸ್‌ ವಲ್ಡ್ -2017 : ಬೆಂಗಳೂರು ಬಾಲಕಿಗೆ ವಿಶ್ವಸುಂದರಿ ಕಿರೀಟ

ಗ್ರೀಸ್‌ನಲ್ಲಿ ನಡೆದ  ಲಿಟಲ್‌ ಮಿಸ್‌ ವಲ್ಡ್‌ -2017ರ  ಅಂತಾರಾಷ್ಟ್ರೀಯ ಸೌಂದರ್ಯ ಹಾಗೂ ಪ್ರತಿಭಾ ಸ್ಪರ್ಧೆಯಲ್ಲಿ ಬೆಂಗಳೂರಿನ ಪೂರ್ವಿ ಜಯಶಾಲಿಯಾಗಿದ್ದಾಳೆ. ಏಳು ದಿನ ನಡೆದ ಸ್ಪರ್ಧೆಯಲ್ಲಿ 30 ದೇಶಗಳಿಂದ ಸುಮಾರು 65ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂತಿಮ ಸುತ್ತಿಗೆ ಭಾರತದ ಐದು ಮಕ್ಕಳೂ ಆಯ್ಕೆಯಾಗಿದ್ದರು. ಅದರಲ್ಲಿ 12ವರ್ಷಕ್ಕಿಂತ ಕಡಿಮೆ ವಯೋಮಿತಿಯ ಮಕ್ಕಳ ವಿಭಾಗದಲ್ಲಿ ಪೂರ್ವಿ ಬೆಸ್ಟ್‌ ಟ್ಯಾಲೆಂಟ್‌ ಪರ್ಫಾಮರ್ ಆಗಿದ್ದಾಳೆ.

ವಿವಿಧ ರಾಷ್ಟ್ರಗಳ 10ಕ್ಕೂ ಮಂದಿ ತೀರ್ಪುಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈ ಸ್ಪರ್ಧೆಯಲ್ಲಿ ಮಕ್ಕಲ ಪ್ರತಿಭೆ, ಆತ್ಮವಿಶ್ವಾಸ , ಸೌಂದರ್ಯ, ವಾಕ್ಚಾಚುರ್ಯತೆಯನ್ನು ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ಬೆಂಗಳೂರಿನ ಪೂರ್ವಿ ವಿನ್ನರ್‌ ಆಗಿ ಹೊರಹೊಮ್ಮಿದ್ದಾಳೆ.

ಉಕ್ರೇನ್ ಮಕ್ಕಳ ಕಲೆ ಮತ್ತು ಸಾಂಸ್ಕೃತಿಕ ಉತ್ಸವದ ಸಂಸ್ಥಾಪಕಿ ನತಾಲಿಯಾ ನೇತೃತ್ವದ್ಲಲಿ ಗ್ರೀಸ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪೂರ್ವಿ ಬೆಂಗಳೂರಿನ ಸೋಫಿಯಾ ಪ್ರೌಢಶಾಲೆಯ 7 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಬೆಂಗಳೂರು ಹಾಗೂ ಚೆನ್ನೈನಲ್ಲಿ ನಡೆದಿದ್ದ ಆಡಿಷನ್‌ನಲ್ಲಿ ಪಾಲ್ಗೊಂಡು ಗ್ರೀಸ್‌ನಲ್ಲಿ ನಡೆಯುವ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದಳು. ಅಂತಿಮ ಸುತ್ತಿನಲ್ಲಿ ಪೂರ್ವಿ ಬೇಲೂರು ಶಿಲಾ ಬಾಲಕಿಯ ವೇಷ ಧರಿಸಿದ್ದಳು.

 

Comments are closed.