ಹೆತ್ತವರು ಆರುಷಿ ಕೊಲೆ ಮಾಡಿಲ್ಲ : ಅಲಹಾಬಾದ್‌ ಹೈಕೋರ್ಟ್‌ನಿಂದ ಮಹತ್ವದ ತೀರ್ಪು

ಲಖನೌ : 14ವರ್ಷದ ಬಾಲಕಿ ಆರುಷಿ ಕೊಲೆ ಪ್ರಕರಣ ಸಂಬಂಧ ಮಹತ್ವದ ತೀರ್ಪು ನೀಡಿದ್ದು, ಪೋಷಕರಾದ ನೂಪುರ್ ಹಾಗೂ ರಾಜೇಶ್ ತಲ್ವಾರ್ ಅಪರಾಧಿಗಳಲ್ಲ. ಅವರು ಕೊಲೆ ಮಾಡಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.


ತಲ್ವಾರ್ ದಂಪತಿಗೆ ಕೇವಲ ಸಂಶಯದ ಮೇಲೆ ಪೋಷಕರನ್ನು ಕೊಲೆ ಅಪರಾಧಿಗಳೆಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ನ್ಯಾಯಾಲಯ ತೀರ್ಪಿಗೆ ನಾವು ಆಭಾರಿಯಾಗಿದ್ದೇವೆ. ಆರುಷಿಯ ಪೋಷಕರು ಅಮಾಯಕರು ಎಂದು ಮೊದಲಿನಿಂದಲೂ ಹೇಳುತಿದ್ದೆವು. ಈಗ ನ್ಯಾಯಾಲಯ ಸಹ ಅದೇ ತೀರ್ಪು ನೀಡಿದೆ ಎಂದಿದ್ದಾರೆ.
ಜೊತೆಗೆ ಆರುಷಿಯನ್ನು ಆಕೆಯ ಹೆತ್ತವರೇ ಕೊಂದಿದ್ದು ಎಂದು ಸಾಬೀತು ಪಡಿಸಲು ಸಿಬಿಐ ವಿಫಲವಾಗಿರುವುದಾಗಿ ಹೇಳಿದ್ದಾರೆ.
2008ರಲ್ಲಿ ಆರುಷಿಯ ಮೃತದೇಹ ಆಕೆಯ ಬೆಡ್ರೂಂನಲ್ಲಿ ಪತ್ತೆಯಾಗಿದ್ದು, ಕತ್ತು ಸೀಳಿ ಆಕೆಯ ಹತ್ಯೆ ಮಾಡಲಾಗಿತ್ತು. ಎರಡು ದಿನಗಳ ಬಳಿಕ ಆರುಷಿ ಮನೆಕೆಲಸದಾಳು ಹೇಮರಾಜ್ ಮೃತದೇಹ ಸಹ ಪತ್ತೆಯಾಗಿತ್ತು. ಇಬ್ಬರ ನಡುವೆ ಅಕ್ರಮ ಸಂಬಂಧ ಇದ್ದ ಕಾರಣ ಪೋಷಕರೇ ಇಬ್ಬರ ಹತ್ಯೆ ಮಾಡಿರುವುದಾಗಿ ಸಿಬಿಐ ಹೇಳಿದ್ದು, 9 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಇಂದು ತೀರ್ಪು ಹೊರಬಿದ್ದಿದೆ.

 

Comments are closed.