ಎಟಿಎಂ ಕಾರ್ಡ್‌ ಲಾಕ್‌ : ಕೊಟ್ಟಾಯಂನಲ್ಲಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಪ್ರಜೆಗೆ ಸುಷ್ಮಾ ಸಹಾಯ

ದೆಹಲಿ : ರಜೆಯ ನಿಮಿತ್ತ ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದ ರ,್ಯಾ ಮೂಲದ ವ್ಯಕ್ತಿಯೊಬ್ಬನಿಗೆ ತನ್ನ ಎಟಿಎಂ ಕಾರ್ಡ್‌ನ ಪಿನ್‌ ಲಾಕ್‌ ಆದ ಕಾರಣ ದೇವಸ್ಥಾನದ ಮುಂದೆ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಒದಗಿಬಂದಿದೆ.

ಆಗರ್ಭ ಶ್ರೀಮಂತನಾದ ಇವಾಂಗೆಲಿನ್ ಎಂಬ 24 ವರ್ಷದ ರಷ್ಯಾ ಮೂಲದ ಯುವಕ ತಮಿಳುನಾಡಿನ ಕುಮಾರಕೊಟ್ಟಂಗೆ ಬಂದಿದ್ದ. ಆತನ ಬಳಿ ಹಣವಿಲ್ಲದ ಕಾರಣ ಕುಮಾರಕೊಟ್ಟಂ ದೇವಾಲಯದ ಬಳಿ ಎಟಿಎಂಗೆ ಹೋಗಿದ್ದ. ಆದರೆ ಕಾರ್ಡ್‌ ಹಾಕಿದ ಕೂಡಲೆ ಎಟಿಎಂ ಒಳಗೇ ಕಾರ್ಡ್‌ ಸಿಕ್ಕಿಹೊಕಿಕೊಂಡು ತೆಗೆಯಲು ಆಗದೆ ಒದ್ದಾಡಿದ್ದಾರೆ. ಎಟಿಎಂನಿಂದ ಕಾರ್ಡನ್ನು ತೆಗೆಯಲು  ಸಾಧ್ಯವಾಗದೆ ವಾಪಸ್‌ ಚೆನ್ನೈಗೆ ಹೋಗಲು ನಿರ್ಧರಿಸಿದ್ದ. ಆದರೆ ಆತನ ಬಳಿ ಹಣವಿಲ್ಲದ ಕಾರಣ ದೇವಾಲಯದ ಬಳಿ ಭಿಕ್ಷೆ ಬೇಡಿದ್ದಾನೆ.

ಈ ರಷ್ಯಾ ಮೂಲದ ಯುವಕನಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹಾಯ ಹಸ್ತ ಚಾಚಿದ್ದು, ಈ ಕುರಿತು ಟ್ಟೀಟ್ ಮಾಡಿದ್ದಾರೆ. ಇವಾಂಗೆಲಿನ್ ನಿಮ್ಮ ದೇಶ ನಮ್ಮ ಬಹುಕಾಲದ ಮಿತ್ರ. ಚೆನ್ನೈನಲ್ಲಿರುವ ನಮ್ಮ ಅಧಿಕಾರಿಗಳು ನಿಮಗೆ ಅಗತ್ಯವಿರುವ ಎಲ್ಲಾ ನೆರವು ಒದಗಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

 

 

 

Comments are closed.