ವಿದೇಶದಲ್ಲಿನ ಪತಿ ಫೋನ್ ರೀಸೀವ್ ಮಾಡಲಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಹೆಂಡತಿ..!

ನವದೆಹಲಿ : ವಿದೇಶದಲ್ಲಿ ನೆಲೆಸಿದ್ದ ಪತಿ ತನ್ನ ಫೋನ್ ರಿಸೀವ್ ಮಾಡಲಿಲ್ಲವೆಂದು ಹೆಂಡತಿ ನೇಣು ಬಿಗಿದುಕೊಂಡು ರವಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರವಿವಾರ ಕರವಾ ಚೌತ್ ವೃತದ ಪ್ರಯುಕ್ತ ಉಪವಾಸ ಆಚರಿಸಿದ್ದ 37 ವರ್ಷದ ಹೆಂಡತಿ ಫೋನ್ ಕರೆ ಮಾಡಿದ್ದಳು. ಆದರೆ ಎಷ್ಟು ಸಲ ಕರೆ ಮಾಡಿದರೂ, ರಿಸೀವ್ ಮಾಡದ ಕಾರಣ ಹತಾಶೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Image result for karwa chauth

ಮೂರು ವರ್ಷಗಳ ಹಿಂದೆ ಮದುವೆಯಾಗಿತ್ತು. ವಿವಾಹವಾದ ಕೇವಲ 15 ದಿನಗಳ ನಂತರ ಪತಿ ಯುಎಸ್ ಗೆ ಹೋಗಿ ನೆಲೆಸಿದ್ದ ಎಂದು ಕುಟುಂಬದ ಮೂಲಗಳಿಂದ ಮಾಹಿತಿ ದೊರೆತಿದೆ. ಪೋಲಿಸರು ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ. ಪತಿಯ ಆಯಸ್ಸು ಅಭಿವೃದ್ಧಿಗಾಗಿ, ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಪತ್ನಿಯರು ಉಪವಾಸ ಕೈಗೊಳ್ಳುವ ಪದ್ಧತಿ ಉತ್ತರ ಭಾರತದಲ್ಲಿದೆ.