ಬಾಹುಬಲಿಗೆ ಟಕ್ಕರ್‌ ನೀಡಿದ ಪದ್ಮಾವತಿ ಟ್ರೇಲರ್‌ : 24 ಗಂಟೆಯಲ್ಲಿ 15 ಮಿಲಿಯನ್‌ ಮಂದಿ ವೀಕ್ಷಣೆ!

ದೆಹಲಿ : ಸಂಜಯ್ ಲೀಲಾ ಬನ್ಸಾಲಿ ಅವರ ಬಹು ನಿರೀಕ್ಷಿತ ಪದ್ಮಾವತಿ ಸಿನಿಮಾದ ಟ್ರೇಲರ್ ಬಗ್ಗೆ ಎಲ್ಲೆಡೆ ಚರ್ಚೆ ಶುರುವಾಗಿದೆ. ಸಾಕಷ್ಟು ಮಂದಿ ಟ್ರೇಲರ್‌ ನೋಡಿ ಫಿದಾ ಆಗಿದ್ದಾರೆ. ಭಾರತದ ಸಿನಿಮಾ ರಂಗದಲ್ಲಿ ಬಾಹುಬಲಿಯ ನಂತರ ಮತ್ತೊಂದು ಸಿನಿಮಾ ಹಿಟ್‌ ಕಾಣುವುದರಲ್ಲಿ ಸಂದೇಹವಿಲ್ಲ  ಎಂಬ ಮಾತು ಕೇಳಿಬರುತ್ತಿದೆ.

ಭಾರತೀಯ ಸಿನಿಮಾ ಇತಿಹಾಸದಲ್ಲಿ ಬಾಹುಬಲಿ -2 ಸಿನಿಮಾ ಭಾರೀ ಹಿಟ್ ಗಳಿಸಿ, ಜನರನ್ನು ಹುಚ್ಚೆಬ್ಬಿಸಿ, ದಾಖಲೆಯ 11 ಮಿಲಿಯನ್‌ ವೀವ್ಸ್ ಕಂಡಿತ್ತು. ಆದರೆ ಪದ್ಮಾವತಿ ಸಿನಿಮಾದ ಟ್ರೇಲರ್‌, ಬಾಹುಬಲಿಯನ್ನೂ ಮೀರಿಸಿದ್ದು, ರಿಲೀಸ್ ಆದ 24 ಗಂಟೆಯೊಳಗೆ 15 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಈ ಮೂಲಕ ಬಾಹುಬಲಿಯ ರೆಕಾರ್ಡ್‌ ಬ್ರೇಕ್ ಮಾಡಿದೆ.
ಪದ್ಮಾವತಿ ಸಿನಿಮಾದಲ್ಲಿ ರಜಪೂತರ ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ, ಮಹಾರಾಜ ರತನ್‌ ಸಿಂಗ್‌ ಆಗಿ ಶಾಹಿದ್ ಕಪೂರ್‌, ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣವೀರ್ ಸಿಂಗ್‌ ಮೋಡಿ ಮಾಡಿದ್ದಾರೆ. ಡಿಸೆಂಬರ್‌ 1ರಂದು ತೆರೆಕಾಣಲಿರುವ ಸಿನಿಮಾ ಅಭಿಮಾನಿಗಳ ಭರವಸೆಯನ್ನು ಉಳಿಸಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕು.

Social Media Auto Publish Powered By : XYZScripts.com