ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲು ನಿರ್ಧರಿಸಿದ ಆಶಿಶ್ ನೆಹ್ರಾ..!

ಎಡಗೈ ವೇಗಿ ಆಶಿಶ್ ನೆಹ್ರಾ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಲಿರುವ ಸೂಚನೆ ನೀಡಿದ್ದಾರೆ. ನವೆಂಬರ್ 1 ರಂದು ನ್ಯೂಜಿಲೆಂಡ್ ವಿರುದ್ಧ ದೆಹಲಿಯಲ್ಲಿ  ನಡೆಯಲಿರುವ ಮೊದಲ ಟಿ-20 ಪಂದ್ಯದಲ್ಲಿ ಆಡಿ ವಿದಾಯ ಹೇಳುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರಿಂದ ಮಾಹಿತಿ ದೊರೆತಿದೆ. 38 ವರ್ಷದ ನೆಹ್ರಾ ಈಗಾಗಲೇ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಷಯ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

Image result for ashish nehra

ಅಕ್ಟೋಬರ್ 22 ರಿಂದ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ 3 ಏಕದಿನ ಹಾಗೂ 3 ಟಿ-20 ಪಂದ್ಯಗಳ ಸರಣಿ ಆರಂಭವಾಗಲಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ಆಯ್ಕೆಯಾಗಿದ್ದರೂ ಮೊದಲೆರಡು ಪಂದ್ಯಗಳಲ್ಲಿ ನೆಹ್ರಾಗೆ ಪ್ಲೇಯಿಂಗ್ ಎಲೆವನ್ ನಲ್ಲಿ ಸ್ಥಾನ ನೀಡಲಾಗಿಲ್ಲ. ಉತ್ತಮ ಪ್ರದರ್ಶನ ತೋರುತ್ತಿರುವ ಕಿರಿಯ ಬೌಲರ್ ಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ನೆಹ್ರಾ ನಿವೃತ್ತಿಯ ನಿರ್ಧಾರಕ್ಕೆ ಬಂದಿರಬಹುದು ಎಂದು ಅನುಮಾನಿಸಲಾಗುತ್ತಿದೆ. ಬರುವ ಐಪಿಎಲ್ ನಲ್ಲೂ ಆಶಿಶ್ ಆಡುವ ಸಾಧ್ಯತೆ ಕಡಿಮೆ.

1999 ರಲ್ಲಿ ಮಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಪಾದಾರ್ಪಣೆ ಮಾಡಿದ ನೆಹ್ರಾ ಇದುವರೆಗೆ 17 ಟೆಸ್ಟ್ ಆಡಿ 44 ವಿಕೆಟ್ ಕಬಳಿಸಿದ್ದಾರೆ. 120 ಏಕದಿನ ಪಂದ್ಯಗಳನ್ನಾಡಿ 157 ವಿಕೆಟ್ ಪಡೆದಿದ್ದಾರೆ. 26 ಟಿ-20 ಪಂದ್ಯಗಳಲ್ಲಿ 36 ವಿಕೆಟ್ ಪಡೆದಿದ್ದಾರೆ.

Comments are closed.

Social Media Auto Publish Powered By : XYZScripts.com