ಎಐಟಿಟಿಯ ನೂತನ ಅಧ್ಯಕ್ಷರಾಗಿ ಖ್ಯಾತ ನಟ ಅನುಪಮ್ ಖೇರ್‌ ನೇಮಕ

ದೆಹಲಿ : ಹಿರಿಯ ನಟ ಅನುಪಮ್‌ ಖೇರ್ ಅವರು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಫ್‌ಐಟಿಟಿ)ಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಎಫ್‌ಐಟಿಟಿಯ ಅಧ್ಯಕ್ಷರಾಗಿದ್ದ ದೂರದರ್ಶನದ ಹಿರಿಯ ನಟ ರಾಜೇಂದ್ರ ಚೌಹಾಣ್‌ ಅವರ ಸ್ಥಾನವನ್ನು ಅನುಪಮ್ ಖೇರ್‌ ತುಂಬಲಿದ್ದಾರೆ.

ಈ ಹಿಂದೆ ಖೇರ್‌ ಅವರು ಕೇಂದ್ರ ಸೆನ್ಸಾರ್‌ ಮಂಡಳಿ ಮತ್ತು ನ್ಯಾಷನಲ್‌ ಸ್ಕೂಲ್ ಆಫ್‌ ಡ್ರಾಮಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರಿಗೆ 2004ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಜೊತೆಗೆ 2011ರಲ್ಲಿ ಪದ್ಮಭೂಷಣ ಪ್ರಶಸ್ತಿಯೂ ಇವರ ಮುಡಿಗೇರಿತ್ತು.

ರಾಜೇಂದ್ರ ಚೌಹಾಣ್‌ ಎಐಟಿಟಿ ಅಧ್ಯಕ್,ರಾಗಿದ್ದಾಗ ಸಾಕಷ್ಟು ವಿವಾದ ಸೃಷ್ಠಿಯಾಗಿತ್ತು. ಅವರನ್ನು ರಾಜಕೀಯ ಪ್ರೇರಿತವಾಗಿ ಆಯ್ಕೆ ಮಾಡಲಾಗಿದೆ ಎಂದಿದ್ದು, ಚೌಹಾಣ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಸುಮಾರು 140 ದಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

 

Social Media Auto Publish Powered By : XYZScripts.com