2nd T-20 : ಕಾಂಗರೂ ಪಡೆಗೆ ಒಲಿದ ಜಯ : ಸೋಲಿಗೆ ಬ್ಯಾಟಿಂಗ್ ವೈಫಲ್ಯ ಕಾರಣ ಎಂದ ಕೊಹ್ಲಿ

ಗುವಾಹಟಿಯ ಬರ್ಸಾಪಾರ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ ಆಸೀ ವೇಗಿ ಜೇಸನ್ ಬೆಹ್ರೆಂಡಾರ್ಫ್ ಅವರ ಮಾರಕ ದಾಳಿಗೆ ತುತ್ತಾಯಿತು. ರೋಹಿತ್, ಧವನ್, ಕೊಹ್ಲಿ ಹಾಗೂ ಮನೀಶ್ ಪಾಂಡೆ ಎರಡಂಕಿಯನ್ನೂ ತಲುಪದೇ ಔಟಾದರು. ಪರಿಣಾಮವಾಗಿ ಭಾರತ ನಿಗದಿತ 20 ಓವರುಗಳಲ್ಲಿ 118 ರನ್ ಗಳ ಸಾಧಾರಣ ಮೊತ್ತ ಸೇರಿಸಿತು. ಜೇಸನ್ ಬೆಹ್ರೆಂಡಾರ್ಫ್ 4 ವಿಕೆಟ್ ಪಡೆದು ಮಿಂಚಿದರು.

India vs Australia: We Were Not Good Enough With The Bat, Says Virat Kohli

ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಹಾಗೂ ಆ್ಯರನ್ ಫಿಂಚ್ ಅವರ ವಿಕೆಟ್ ಬೇಗನೆ ಕಳೆದುಕೊಂಡಿತು. ನಂತರ ಬಂದ ಮೋಯಿಸೆಸ್ ಹೆನ್ರೀಕ್ಸ್ 62 ಹಾಗೂ ಟ್ರಾವಿಸ್ ಹೆಡ್ 48 ರನ್ ಬಾರಿಸಿ ಆಸ್ಟ್ರೇಲಿಯಾ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತದ ಪರ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾಹ್ ತಲಾ 1 ವಿಕೆಟ್ ಪಡೆದರು. ನಾಲ್ಕು ವಿಕೆಟ್ ಪಡೆದ ಬೆಹ್ರೆಂಡಾರ್ಫ್ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಪಾತ್ರರಾದರು.

ಮ್ಯಾಚ್ ನಂತರ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ‘ ನಮ್ಮ ಬ್ಯಾಟಿಂಗ್ ವೈಫಲ್ಯ ಸೋಲಿಗೆ ಕಾರಣವಾಯಿತು. ಬೆಹ್ರೆಂಡಾರ್ಫ್ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು ‘ ಎಂದು ಹೇಳಿದ್ದಾರೆ.

3 thoughts on “2nd T-20 : ಕಾಂಗರೂ ಪಡೆಗೆ ಒಲಿದ ಜಯ : ಸೋಲಿಗೆ ಬ್ಯಾಟಿಂಗ್ ವೈಫಲ್ಯ ಕಾರಣ ಎಂದ ಕೊಹ್ಲಿ

 • October 18, 2017 at 1:27 PM
  Permalink

  Thanks for the marvelous posting! I really enjoyed reading it, you may be a great author.I will remember to bookmark your blog and may come back at some point. I want to encourage you to ultimately continue your great writing, have a nice evening!|

 • October 18, 2017 at 3:09 PM
  Permalink

  I love your blog.. very nice colors & theme. Did you make this website yourself or did you hire someone to do it for you? Plz respond as I’m looking to construct my own blog and would like to know where u got this from. appreciate it|

 • October 20, 2017 at 9:44 PM
  Permalink

  Hello there! I know this is somewhat off topic but I was wondering if you knew where I could locate a captcha plugin for my comment form? I’m using the same blog platform as yours and I’m having difficulty finding one? Thanks a lot!|

Comments are closed.

Social Media Auto Publish Powered By : XYZScripts.com