ತಮ್ಮ ಬಗ್ಗೆ ನಂಬೋಕೆ ಸಾಧ್ಯವೇ ಇಲ್ಲದಂತಹ ಸತ್ಯವನ್ನು ಪ್ರಭಾಸ್‌ ಹೇಳಿದ್ದಾರೆ ನೋಡಿ…..

ಪ್ರಭಾಸ್. ಬಾಹುಬಲಿ ಸಿನಿಮಾದ ನಂತರ ಭಾರೀ ಬೇಡಿಕೆಯ ನಟರಾಗಿ ಮಿಂಚುತ್ತಿದ್ದಾರೆ. ಅಮರೇಂದ್ರ ಬಾಹುಬಲಿಯಾಗಿ ತೆರೆಯ ಮೇಲೆ ಮಿಂಚಿದ್ದ ನಟನಿಗೆ ಒಂದು ಸಮಸ್ಯೆ ಇದೆಯಂತೆ.  ಆ ಕುರಿತು ಸ್ವತಃ ಪ್ರಭಾಸ್‌ ಹೇಳಿಕೆ ನೀಡಿದ್ದಾರೆ.
ಪ್ರಭಾಸ್‌ಗೆ ಕ್ಯಾಮರಾ ಮುಂದೆ ಬಂದು ನಟಿಸಲು ನಾಚಿಕೆಯಂತೆ. ಜೊತೆಗೆ ಮುಂದಿನ ದಿನಗಳಲ್ಲಿ  ಸಮಾಜಸೇವೆಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದುಕೊಂಡಿರುವುದಾಗಿ ಪ್ರಭಾಸ್ ಆಗಾಗ ಹೇಳುತ್ತಿರುತ್ತಾರೆ. ಬಾಹುಬಲಿ ಸಿನಿಮಾದಲ್ಲಿ ಮಹೇಂದ್ರ ಬಾಹುಬಲಿ, ಅಮರೇಂದ್ರ ಬಾಹುಬಲಿಯಾಗಿ ನಟಿಸಿ ಎಲ್ಲರ ಮನಗೆದ್ದಿದ್ದ ಪ್ರಭಾಸ್‌ಗೆ ಈಗಲೂ ನಟನೆ ಮಾಡುವುದೆಂದರೆ ನಾಚಿಕೆಯಂತೆ. ಅಲ್ಲದೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋಗುವುದು, ಹೆಚ್ಚು ಜನರ ಮುಂದೆ ಕಾಣಿಸಿಕೊಳ್ಳುವುದು ಮುಜುಗರ ತರುತ್ತದೆ ಎಂದು ಪ್ರಭಾಸ್‌ ಹೇಳಿದ್ದಾರೆ.

ಜೊತೆಗೆ ನಾನು ಸಾಕಷ್ಟು ಸಿನಿಮಾದಲ್ಲಿ ನಟನೆ ಮಾಡಿದ್ದೇನೆ. ಆದರೂ ನನಗೆ ನಾಚಿಕೆ ಕಡಿಮೆಯಾಗಿಲ್ಲ. ನನ್ನ ಸಿನಿಮಾವನ್ನು ಲಕ್ಷಾಂತರ ಮಂದಿ ನೋಡಬೇಕು ಎಂದುವ ಬಯಸುತ್ತೇನೆ. ಆದರೆ ಅಷ್ಟು ಜನರನ್ನು ಫೇಸ್‌ ಮಾಡುವುದು ನನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ.
ಸಿನಿಮಾ ಇಂಡಸ್ಟ್ರಿಗೆ ಬಂದು 13-14 ವರ್ಷವಾಯಿತು.  ಈಗಲೂ ನನಗೆ ವೇದಿಕೆ ಮೇಲೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿದಿಲ್ಲ. ಮೊದಲಿಗಿಂತ ಎಷ್ಟೋ ಸುಧಾರಿಸಿದ್ದೇನೆ ಎನಿಸುತ್ತಿದೆ. ತಮ್ಮ ನೆಚ್ಚಿನ ನಟ ಹೊರಗೆಲ್ಲೂ ಬರುವುದಿಲ್ಲ, ಮಾತನಾಡುವುದಿಲ್ಲ ಎಂದು ಬೇಸರ ಪಟ್ಟುಕೊಳ್ಳುತ್ತಾರೆ. ಆದರೆ ಮೊದಲಿಗಿಂತ ಹೆಚ್ಚು ಧೈರ್ಯ ಬಂದಿದೆ ಎಂದಿದ್ದಾರೆ.

ಪ್ರಭಾಸ್ ತಂದೆ ಉಪ್ಪಾಲಪತಿ ಸೂರ್ಯ ನಾರಾಯಣ ರಾಜು ಖ್ಯಾತ ನಿರ್ಮಾಪಕರಾಗಿದ್ದಾರೆ. ಅಲ್ಲದೆ ಪ್ರಭಾಸ್‌ ಚಿಕ್ಕಪ್ಪ ಕೃಷ್ಣಂ ರಾಜು ಉಪ್ಪಾಲಪತಿ ಸಹ ತೆಲುಗು ಸಿನಿಮಾದಲ್ಲಿ ತಮ್ಮ ಹೆಸರನ್ನು ಗುರುತಿಸಿಕೊಂಡಿದ್ದಾರೆ.  ಇಂತಹ ಹಿನ್ನೆಲೆಯಿಂದ ಬಂದ ಪ್ರಭಾಸ್‌ಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಹೇಗಿರಬೇಕು ಎಂಬುದನ್ನು ಹೇಳಿಕೊಡಬೇಕಾಗಿಲ್ಲ. ಆದರೆ ಪ್ರಭಾಸ್‌ ಮಾತ್ರ ಆ ರೀತಿ ಇಲ್ಲವೇ ಇಲ್ಲ. ಮೊದಲಿಗೆ ಸಿನಿಮಾ ಇಂಡಸ್ಟ್ರಿಗೆ ಹೋಗಲು ಅವರ ಕುಟುಂಬಸ್ಥರು ಹೇಳಿದಾಗ ಅದಕ್ಕೆ ಪ್ರಭಾಸ್‌ ಒಪ್ಪಿರಲಿಲ್ಲ. ಆದರೆ ಬಳಿಕ ಅವರು ಸಿನಿಮಾ ರಂಗಕ್ಕೆ ಬಂದು ತಮ್ಮ ಹೆಸರನ್ನು ಅಚ್ಚಳಿಯದೆ ಉಳಿಯುವಂತೆ ಮಾಡಿದ್ದಾರೆ.

ನನ್ನ ಅಂಕಲ್ ಒಬ್ಬ ನಟ. ನನ್ನ ತಂದೆ ನಿರ್ಮಾಪಕರು. ಆಗ ನನಗ ಸಿನಿಮಾಗೆ ಹೋಗುತ್ತೀಯ ಎಂದು ಕೇಳಿದರು. ಆದರೆ ಅಷ್ಟು ಜನರ ಮುಂದೆ ನಟಿಸುವುದು ಹೇಗೆ ಎಂದು ಕೇಳಿದ್ದೆ. ನನಗೆ ನಾಚಿಕೆಯಾಗುತ್ತಿತ್ತು. ನಾನು ಸೋಮಾರಿಯಾಗಿದ್ದ ಕಾರಣ ಯಾವುದಾದರೂ ಚಿಕ್ಕ ಉದ್ಯಮ ಮಾಡಿಕೊಂಡಿರೋಣ ಎಂದುಕೊಂಡಿದ್ದೆ. ನನ್ನ ಕುಟುಂಬಸ್ಥರಿಗೆ ರುಚಿಯದ ಅಡುಗೆ ಎಂದರೆ ಇಷ್ಟ. ಅದಕ್ಕಾಗಿ ಹೋಟೆಲ್ ಬ್ಯುಸಿನೆಸ್ ಮಾಡೋಮ ಎಂದುಕೊಂಡಿದ್ದೆ. ಆದರೆ ನನ್ನ ತಲೆಯೊಳಗೆ ಏನು ನಡೆಯುತ್ತಿತ್ತೋ ಗೊತ್ತಿಲ್ಲ. ಒಂದು ದಿನ ನನ್ನ ಅಂಕಲ್‌ ಸಿನಿಮಾ ನೋಡುತ್ತಿದ್ದೆ. ಅಂಕಲ್ ಇದ್ದ ಜಾಗದಲ್ಲಿ ನನ್ನನ್ನು ಕಲ್ಪನೆ ಮಾಡಿಕೊಂಡೆ. ಬಳಿಕ ಇದು ಚೆನ್ನಾಗಿದೆ ಎನಿಸತೊಡಗಿತು. ಬಳಿಕ ಸಿನಿಮಾ ರಂಗಕ್ಕೆ ಕಾಲಿಟ್ಟೆ ಎಂದಿದ್ದಾರೆ.

ಒಂದು ದಿನ ನನ್ನ ಸ್ನೇಹಿತನ ಹತ್ತಿರ ನಾನು ನಟನೆ ಮಾಡುವುದಾಗಿ ಹೇಳಿದೆ. ಆದರೆ ಅವನು ನನ್ನನ್ನು ನಂಬಲಿಲ್ಲ. ಆದರೆ ಅವನು ಈಗ ಸಾಹೋ ಸಿನಿಮಾದ ನಿರ್ಮಾಪಕನಾಗಿದ್ದಾನೆ.
ಭಯ ಹಾಗೂ ಸೋಲು ಪ್ರತೀ ಸಿನಿಮಾದಲ್ಲೂ ಕಾಡುತ್ತಿರುತ್ತದೆ. ಬಾಹುಬಲಿ ಮಾಡುವಾಗಲೂ ಆ ಭಯ ಇತ್ತು. ಆದರೆ ನಾವೇನು ನಂಬಿರುತ್ತೇವೋ ಅದನ್ನು ಮಾಡಿ ಮುಗಿಸಿಬಿಡಬೇಕು ಎನ್ನುತ್ತಾರೆ ಪ್ರಭಾಸ್‌.

Comments are closed.