ಮಹಿಳೆಯರಿಗೆ ಸಮಾನತೆ ಬೇಕೆ ? ಹಾಗಿದ್ದರೆ ಪುರುಷರೂ ಗರ್ಭ ಧರಿಸಲಿ

ದೆಹಲಿ : ಮಹಿಳೆಯರು ಪುರುಷರಿಗೆ ಎಂದಿಗೂ ಸಮಾನರಲ್ಲ ಅವರು ಪುರುಷರಿಗಿಂತ ಕೆಳಗೆ ಇರಬೇಕು. ಏಕೆಂದರೆ ಪುರುಷರು ಮಕ್ಕಳನ್ನು ಹೆರಲು ಸಾಧ್ಯವಿಲ್ಲ. ಮಹಿಳೆಯರಿಗೆ ಸಮಾನತೆ ಬೇಕಾದರೆ ಪುರುಷರು ನಾಲ್ಕುವರೆ ತಿಂಗಲು ಗರ್ಭ ಧರಿಸುವಂತೆ ಕೇಳಿಕೊಳ್ಳಬೇಕು ಎಂದು ಜಮಾತ್‌ ಉಲೇಮಾ ಕಾರ್ಯದರ್ಶಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

45 ವರ್ಷದ ಮಹಿಳೆ ನಾಲ್ಕು ಮಂದಿಯ ಗುಂಪಿನೊಂದಿಗೆ ಹಜ್‌ ಯಾತ್ರೆ ಕೈಗೊಳ್ಳಬಹುದು ಎಂದು ಸರ್ಕಾರ ಕರದು ನೀತಿ ಜಾರಿಗೊಳಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿರುವ ಇವರು, ಇದು ಇಸ್ಲಾಂ ವಿರೋಧಿ ಎಂದಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸಚಿವ ಮುಖ್ತಾರ್ ಅಬ್ಬಾಸ್‌ ನಖ್ವಿ  ಅವರಿಗೆ ಕರಡು ನೀತಿಯನ್ನು ಸಲ್ಲಿಸಿದ್ದರು. ಇದಕ್ಕೆ ದೇಶಾದ್ಯಂತ ಮುಸ್ಲಿಂ ಪಂಡಿತರು ಆಕ್ರೋಶ ವ್ಯಕ್ತಪಡಿಸಿದ್ದು, ಪುರುಷ ಸಂಬಂಧಿ ಇಲ್ಲದೆ ಮಹಿಳೆಯೊಬ್ಬಳು ಹಜ್ ಯಾತ್ರೆ ಮಾಡುವುದು ಮಹಾಪಾಪ ಎಂದಿದ್ದಾರೆ.

 

 

Comments are closed.

Social Media Auto Publish Powered By : XYZScripts.com