“ಪದ್ಮಾವತಿ” ಟ್ರೇಲರ್‌ ವೀಕ್ಷಿಸಿದ ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಹೇಳಿದ್ದೇನು ?

ಮುಂಬೈ : ಭಾರತದ ಸಿನಿಮಾ ಇತಿಹಾಸದಲ್ಲಿ ದಾಖಲಾಗುವಂತಹ ಬಾಹುಬಲಿ ಎಂಬ ಸಿನಿಮಾ ಮಾಡಿದ್ದ ನಿರ್ದೇಶಕ ರಾಜಮೌಳಿ , ಸೋಮವಾರವಷ್ಟೇ ಬಿಡುಗಡೆಯಾದ ದೀಪಿಕಾ, ಶಾಹಿದ್, ರಣವೀರ್‌ ಸಿಂಗ್ ಅಭಿನಯದ ಪದ್ಮಾವತಿ ಟ್ರೇಲರ್ ನೋಡಿ ಹೊಗಳಿದ್ದಾರೆ.

ಸಂಜಯ್‌ ಲೀಲಾ ಬನ್ಸಾಲಿ ಅವರ ನಿರ್ದೇಶನದ ಪದ್ಮಾವತಿ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ರಜಪೂತರ ರಾಣಿ ಪದ್ಮಾವತಿಯ ಗಂಭೀರತೆ, ಆಕೆಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ಸಿನಿಮಾ ಒಳಗೊಂಡಿದ್ದು, ರಣವೀರ್ ಸಿಂಗ್‌ ಖಿಲ್ಜಿ ಅವತಾರದಲ್ಲಿ ಮಿಂಚಿದ್ದಾರೆ. ಮತ್ತೊಂದೆಡೆ ರಾಜಮನೆತನದ ಉಡುಪಿನಲ್ಲಿ ದೀಪಿಕಾ ಪಡುಕೋಣೆ ಸೌಂದರ್ಯ ಕಣ್ತುಂಬಿಕೊಳ್ಳುವಂತಿದ್ದು, ರಜಪೂತ ಅರಸನಾಗಿ ಶಾಹಿದ್ ಸಹ ಅದ್ಭುತ ನಟನೆ ಮಾಡಿದ್ದಾರೆ.

ಈ ಸಿನಿಮಾದ ಟ್ರೇಲರ್‌ ನೋಡಿದ ರಾಜಮೌಳಿ  ಟ್ವೀಟ್ ಮಾಡಿದ್ದು, ಸಿನಿಮಾದ ಟ್ರೇಲರ್‌ ಬಹಳ ಸುಂದರವಾಗಿ ಮೂಡಿಬಂದಿದೆ. ಪ್ರತಿಯೊಂದು ಸೀನ್‌ಗೂ ಮಹತ್ವ ನೀಡಿ ಶೂಟ್‌ ಮಾಡಲಾಗಿದೆ ಎಂದಿದ್ದಾರೆ.

ನಿರೀಕ್ಷೆಯಂತೆಯೇ ಟ್ರೇಲರ್‌ನಲ್ಲಿ ಉತ್ತಮ ವಿಶುವಲ್‌ ಎಫೆಕ್ಟ್‌ ನೀಡಲಾಗಿದ್ದು, ಉತ್ತಮ ಸಂಗೀತ ನೀಡಲಾಗಿದೆ.

ರಾಜಮೌಳಿ ನಿರ್ದೇಶನದ ಬಾಹುಬಲಿ-1 ಹಾಗೂ ಬಾಹುಬಲಿ -2 ಟ್ರೇಲರ್‌ ರಿಲೀಸ್ ಆದಾಗಲೂ ಭಾರೀ ಸೆನ್ಸೇಷನ್ ಕ್ರಿಯೇಟ್‌ ಆಗಿತ್ತು. ಈಗ ಪದ್ಮಾವತಿ  ಟ್ರೇಲರ್‌ ಸಹ ಭಾರೀ ಪ್ರಶಂಸೆಗೆ ಪಾತ್ರವಾಗಿದ್ದು, ಡಿಸೆಂಬರ್‌ 1ರಂದು ಎಲ್ಲಾ ಕುತೂಹಲಗಳಿಗೆ ತೆರೆ ಬೀಳಲಿದೆ.

Comments are closed.