ಏನ್ ಬೆಳ್ಳಗಿದ್ದೀಯಾ ಅಂತ ಪೊಗರಾ..? : ಮಿಲ್ಕಿ ಬ್ಯೂಟಿ ತಮನ್ನಾಗೆ ಹೀಗೆ ಕೇಳಿದ್ದು ಯಾರು ?

ಇತ್ತೀಚೆಗೆ ಕೆಲ ಸೆಲೆಬ್ರೆಟಿಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರ್ತಾರೆ. ಟ್ವಿಟ್ಟರ್,  ಫೇಸ್ಬುಕ್ ಮೂಲಕ ಅಭಿಮಾನಿಗಳಿಗೆ ಹೆಚ್ಚು ಹೆಚ್ವು ಹತ್ತಿರವಾಗ್ತಿದ್ದಾರೆ. ಅದೇ ರೀತಿ ತೆಲುಗು ನಟಿ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಕೂಡ ಟ್ವಿಟ್ಟರ್ ಮೂಲಕ‌ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿ ಅವರನ್ನ ಖುಷಿಪಡಿಸೋ ಪ್ರಯತ್ನ ಮಾಡ್ತಿರ್ತಾಳೆ.

ಇದೇ ರೀತಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಅಭಿಮಾನಿಯೊಬ್ಬ ‘ಏನ್ ಬೆಳ್ಳಗಿದ್ದೀಯಾ ಅಂತ ಪೊಗರಾ..? ನನ್ನ ಪ್ರಶ್ನೆಗೆ ಯಾಕೆ ಉತ್ತರಿಸ್ತಿಲ್ಲ’ ಅಂತ ಏಕ್ ಧಮ್ ತಮನ್ನಾಳನ್ನ ಕೇಳಿಬಿಟ್ಟಿದ್ದಾನೆ.

ಈತ ಸಾಕಷ್ಟು ಬಾರಿ ಟ್ವೀಟ್ ಮಾಡಿ ಪ್ರಶ್ನೆಗಳನ್ನ ಕೇಳಿದಾಗ ತಮನ್ನಾಗೆ ಉತ್ತರಿಸೋಕೆ ಸಾಧ್ಯವಾಗಿರಲಿಲ್ಲ. ಇದೇ ಕೋಪದಲ್ಲಿ ಆತ ಆ ರೀತಿ ಗರಂ ಆಗಿ ಟ್ವೀಟ್ ಮಾಡಿದ್ದಾನೆ. ಕೂಡಲೇ ಆತನ ಟ್ವೀಟ್ ನೋಡಿ ಪ್ರತಿಕ್ರಿಯಿಸಿರೋ ತಮನ್ನಾ, ಇಲ್ಲ ಆ ರೀತಿ ಪೋಗರೇನು ಇಲ್ಲ, ನಿಮಗೆ ಒಳ್ಳೆಯದಾಗಲಿ ಅಂತ ಟ್ವೀಟ್ ಮಾಡಿ ಆತನನ್ನ ಸಮಾಧಾನ ಪಡಿಸಿದ್ದಾಳೆ.

ಸೌತ್ ಸಿನಿ ದುನಿಯಾದಲ್ಲಿ ಮಾತ್ರವಲ್ಲದೇ ಬಾಲಿವುಡ್ ಅಂಗಳದಲ್ಲೂ ಕಮಾಲ್ ಮಾಡ್ತಿರೋ ಚೆಲುವೆ ತಮನ್ನಾ ಭಾಟಿಯಾ. ಬಾಹುಬಲಿ ನಂತ್ರ ಹೇಳಿಕೊಳ್ಳುವಂತ ದೊಡ್ಡ ಪ್ರಾಜೆಕ್ಟ್ ಯಾವ್ದು ಸದ್ಯ ತಮನ್ನಾ ಕೈಲಿಲ್ಲ. ಬಾಲಿವುಡ್ ಸೂಪರ್ ಹಿಟ್ ಕ್ವೀನ್ ಚಿತ್ರದ ತೆಲುಗು ಅವತರಣಿಕೆಯಲ್ಲಿ ಮಿಲ್ಕಿ‌ ಬ್ಯೂಟಿ ಬಣ್ಣ ಹಚ್ಚಿದ್ದು, ಇತ್ತೀಚೆಗೆ ಈ ಚಿತ್ರದ ಶೂಟಿಂಗ್ ಶುರುವಾಗಿದೆ.

Social Media Auto Publish Powered By : XYZScripts.com