ಕೆಂಡ ಹಾಯುವಾಗ ಕೆಳಗೆ ಬಿದ್ದು ಒದ್ದಾಡಿದ ವ್ಯಕ್ತಿ: ಮೊಬೈಲ್‌ನಲ್ಲಿ ದೃಶ್ಯ ಸೆರೆ

ಕೊಪ್ಪಳ : ಮೊಹರಂ ನಿಮಿತ್ತ ಕೌಡೆ ಪೀರ ದೇವರ ಆಚರಣೆ ವೇಳೆ ಕೆಂಡ ಹಾಯುವಾಗ ಯುವಕನೊಬ್ಬ ಕೆಂಡದೊಳಗೆ ಬಿದ್ದ ಘಟನೆ ಕೊಪ್ಪಲ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್‌ ಗ್ರಾಮದಲ್ಲಿ ನಡೆದಿದೆ.

ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರೆಲ್ಲ ಸೇರಿ ಯುವಕನನ್ನು ರಕ್ಷಿಸಿದ್ದಾರೆ. ಗಾಯಗೊಂಡ ಯುವಕನನ್ನು ಖಾದರ್‌ ಭಾಷಾ ಎಂದು ತಿಳಿದುಬಂದಿದೆ. ಭಾಷಾನನ್ನು ಕೊಪ್ಪಳ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕ ಕೆಂಡದಲ್ಲಿ ಬಿದ್ದು ಒದ್ದಾಡುತ್ತಿದ್ದ ದೃಶ್ಯ ಸೆರೆಯಾಗಿದೆ.

 

Comments are closed.

Social Media Auto Publish Powered By : XYZScripts.com