ಆರ್‌ಎಸ್‌ಎಸ್‌ನಲ್ಲಿ ಮಹಿಳೆಯರು ಎಂದಾದರೂ ಖಾಕಿ ಚಡ್ಡಿ ಧರಿಸಿದ್ದನ್ನು ನೋಡಿದ್ದೀರಾ…? : ರಾಹುಲ್‌ ಗಾಂಧಿ

ದೆಹಲಿ : ಬಿಜೆಪಿ ಅಥವಾ ಆರ್‌ಎಸ್‌ಎಸ್‌ನಲ್ಲಿರುವ ಯಾರಾದರೂ ಮಹಿಳೆಯರು ಖಾಕಿ ಚಡ್ಡಿ ಹಾಕಿರುವುದನ್ನು ನೀವು ಎಂದಾದರೂ ನೋಡಿದ್ದೀರಾ ? ನಾನಂತೂ ನೋಡಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಆರ್‌ಎಸ್‌ಎಸ್‌, ಬಿಜೆಪಿಯ ಪ್ರಮುಖ ಸಂಘಟನೆ. ಅದರಲ್ಲಿ ಎಷ್ಟು ಮಹಿಳೆಯರಿದ್ದಾರೆ. ಅವರು ಎಂದಾದ0ರೂ ಖಾಕಿ ಚಡ್ಡಿ ಹಾಕಿದ್ದು ನೋಡಿದ್ದೀರಾ ಎಂದಿದ್ದಾರೆ.

ಮಹಿಳೆಯರು ಎಲ್ಲಿಯವರೆಗು ಮೌನವಾಗಿರುತ್ತಾರೋ ಅಲ್ಲಿಯವರೆಗೆ ಎಲ್ಲವೂ ಸರಿಯಿರುತ್ತದೆ. ಮಹಿಳೆಯರು ಮಾತನಾಡಲು ಪ್ರಾರಂಭಿಸಿದರೆ ಅವರ ಬಾಯಿ ಮುಚ್ಚಿಸಲಾಗುತ್ತದೆ. ನಮ್ಮ ಕಾಂಗ್ರೆಸ್‌ನಲ್ಲಿ ಹಾಗಲ್ಲ . ಅಧಿಕಾರಕ್ಕೆ ಬಂದರೆ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವುದಾಗಿ ಹೇಳಿದ್ದಾರೆ.

ಗುಜರಾತ್‌ನಲ್ಲಿ  ಯುವಜನತೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್‌, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತದಲ್ಲಿ ಉದ್ಯೋಗ ಸೃಷ್ಠಿ ಮಾಡುವಲ್ಲಿ ಮೋದಿ  ವಿಫಲರಾಗಿದ್ದಾರೆ. ಭಾರತೀಯರ ಬದಲು ಚೀನೀಯರಿಗೆ ಉದ್ಯೋಗ ಸಿಗುವಂತೆ ಮಾಡಿದ್ದಾರೆ. ಇದೇ ವೇಳೆ ಸ್ಟಾರ್ಟ್‌ ಅಪ್ ಇಂಡಿಯಾದ ಬಗ್ಗೆ ಕೇಳಿದ್ದೀರಾ..? ಸ್ಟಾರ್ಟ್‌ ಅಪ್ ಐಕಾನ್‌ ಬಗ್ಗೆ ಕೇಳಿದ್ದೀರಾ..? ಅದು ಬೇರೆ ಯಾರೋ ಅಲ್ಲ ಅಮಿತ್ ಶಾ ಪುತ್ರ ಜಯ್ ಶಾ ಎಂದಿದ್ದು, ಈ ವಿಚಾರವಾಗಿ ಮೋದಿ ಮೌನವಹಿಸಿದ್ದಾರೆ. ಈ ಬ್ಗಗೆ ತುಟಿ ಬಿಚ್ಚುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಮೋದಿ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ ಈ ಫೋನ್‌ಗಳೆಲ್ಲವೂ ಚೀನೀ ನಿರ್ಮಿತವಾದವು. ಇದರಿಂದಾಗಿ ಚೀನೀಯರಿಗೆ ಸಹಾಯವಾಗುತ್ತದೆಯೇ ಹೊರತು ಭಾರತೀಯರಿಗಲ್ಲ. ಆದ್ದರಿಂದ ನಮ್ಮ ದೇಶದ ಫೋನ್‌ಗಳನ್ನೇ ಬಳಸಿ ಎಂದು ಸಲಹೆ ನೀಡಿದ್ದಾರೆ.

 

 

 

 

Comments are closed.