ದೆಹಲಿಯಲ್ಲಿ ಮೆಟ್ರೋ ಪ್ರಯಾಣ ದುಬಾರಿ : ಗಾಯದ ಮೇಲೆ ಬರೆ ಹಾಕಿದ ಸರ್ಕಾರ

ದೆಹಲಿ : ರಾಜಧಾನಿ ದೆಹಲಿಯಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆಯಾಗಿದ್ದು, ಜನ ಪರದಾಡುವಂತಾಗಿದೆ. ಕೆಲ ತಿಂಗಳ ಹಿಂದಷ್ಟೇ ಮೆಟ್ರೋ ಪ್ರಯಾಣ ದರವನ್ನು ಏರಿಸಲಾಗಿತ್ತು. ಈಗ ಮತ್ತೆ ದರ ಏರಿಕೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ದೆಹಲಿ ಮೆಟ್ರೋದಲ್ಲಿ 2ರಿಂದ 5 ಕಿ.ಮೀ ವರೆಗಿನ ಪ್ರಯಾಣ ದರ ಐದು ರೂ ಏರಿಕೆ ಮಾಡಲಾಗಿದೆ. ಐದು ಕಿ.ಮೀ ಗಿಂತ ಹೆಚ್ಚಿನ ದೂರ ಪ್ರಯಾಣ ಮಾಡುವವರು ಹೆಚ್ಚುವರಿಯಾಗಿ 10 ರೂ ನೀಡಬೇಕಿದೆ. ಐದರಿಂದ 12 ಕಿ.ಮೀ ಗೆ 30 ರೂ ನೀಡಬೇಕಿದ್ದು, 32 ಕಿ.ಮೀ ದೂರದ ಪ್ರಯಾಣಕ್ಕೆ 60 ರೂ ಪಾವತಿಸಬೇಕಿದೆ.

ಸಾಮಾನ್ಯಾವಾಗಿ ದೆಹಲಿ ಮೆಟ್ರೋದಲ್ಲಿ ಓಡಾಡುವ ಮಂದಿ ಹೆಚ್ಚಿನದಾಗಿ ಸ್ಮಾರ್ಟ್‌ ಕಾರ್ಡ್‌ ಬಳಕೆ ಮಾಲಿದ್ದು, ಪ್ರಯಾಣಕ್ಕೆ ಶೇ.10ರಷ್ಟು ರಿಯಾಯಿತಿ ನೀಡಲಾಗಿದೆ.

ಮತ್ತೊಂದೆಡೆ ಈ ಬಗ್ಗೆ ನಿರ್ಣಯ ಮಂಡನೆಗೆ ಬಿಜೆಪಿ ನಿರಾಕರಿಸಿದ್ದು, ದರ ಏರಿಕೆ ಪ್ರಸ್ತಾಪ ಹಿಂತೆಗೆದುಕೊಂಡದೆ 3000ಕೋಟಿ ರೂ ಹಣವನ್ನು ದೆಹಲಿ ಸರ್ಕಾರವೇ ಭರಿಸಲಿ ಎಂದು ಬಿಜೆಪಿ ಹೇಳಿದೆ. ದೆಹಲಿ ಸಾರಿಗೆ ಸಚಿವ ಕೈಲಾಶ್‌  ಗೆಹ್ಲೋಟ್‌ ಉದ್ದೇಶಿತ ಮೆಟ್ರೋ ದರ ಏರಿಕೆಯ ನಿರ್ಣಯವನ್ನು ಮಂಡಿಸಿದ್ದು, ಧ್ವನಿಮತದ ಮೂಲಕ ಇದಕ್ಕೆ ಅನುಮೋದನೆ ನೀಡಲಾಯಿತು. ಮೆಟ್ರೋ ದರ ಏರಿಕೆ ನಿಲ್ಲಿಸಬೇಕೆಂದರೆ ದೆಹಲಿ ಸರ್ಕಾರ 3000ಕೋಟಿ ಭರಿಸುವಂತೆ ಹೇಳಿದ್ದಾರೆ.

 

 

Comments are closed.

Social Media Auto Publish Powered By : XYZScripts.com