ಅಮೇಥಿಗಾಗಿ ತಮ್ಮ ಮೂರು ತಲೆಮಾರು ಏನು ಮಾಡಿದೆ ಹೇಳಿ ರಾಹುಲ್‌ ಜೀ : ಅಮಿತ್ ಶಾ

ಅಮೇಥಿ : ಬಿಜೆಪಿ ಸಕ್ರಿಯ ರಾಜಕಾರಣದಲ್ಲಿ ತೊಡಗಿದೆ. ಆದಕ್ಕೆ ಹೆದರಿ ರಾಹುಲ್ ಗಾಂಧಿ ಆಗಾಗ ಅಮೇಥಿಗೆ ಭೇಟಿ ನೀಡುತ್ತಿರುತ್ತಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಎರಡು ದಿನಗಳ ಅಮೇಥಿ ಪ್ರವಾಸ ಕೈಗೊಂಡಿದ್ದು, ಅವರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಾಥ್‌ ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ಅಮಿತ್ ಶಾ, ಸದಾ ಗುಜರಾತ್‌ ಅಭಿವೃದ್ಧಿಯ ಬಗ್ಗೆ ಮಾತನಾಡುವ ರಾಹುಲ್‌ ಗಾಂಧಿ ತಮ್ಮ ಸ್ವಕ್ಷೇತ್ರ ಅಮೇಥಿಯಲ್ಲಿ ಏನು ಮಾಡಿದ್ದಾರೆ. ಬಿಜೆಪಿಯ ಹೆದರಿಕೆಯಿಂದಾಗಿ ಅವರು ಆಗ್ಗಾಗ್ಗೆ ಅಮೇಥಿಗೆ ಬಂದು ಹೋಗುತ್ತಿರುವುದಾಗಿ ವ್ಯಂಗ್ಯಾಮಾಡಿದ್ದಾರೆ.

ಬಿಜೆಪಿ ತನ್ನ ಮೂರು ವರ್ಷದ ಆಡಳಿತಾವಧಿಯಲ್ಲಿ ಏನು ಮಾಡಿದೆ ಎಂದು ಕೇಳುವ ರಾಹುಲ್‌ ಗಾಂಧಿ, ತಮ್ಮ ಮೂರು ತಲೆಮಾರು ಅಮೇಥಿಗಾಗಿ ಏನು ಮಾಡಿದೆ ಹೇಳಲಿ. ಅವರಿಗೆ ಅಭಿವೃದ್ದಿ ಕಾಣುವುದಿಲ್ಲ ಏಕೆಂದರೆ ಅವರು ಇಟಾಲಿಯನ್‌ ಕನ್ನಡಕ ಹಾಕಿಕೊಂಡಿದ್ದಾರೆ ಎಂದು ರಾಹುಲ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಳಿಕ ಮಾತನಾಡಿದ ಯೋಗಿ ಆದಿತ್ಯನಾಥ್‌, ಹಿಂದಿನ ಸರ್ಕಾರವಿದ್ದಾಗ ರೈತರು ಭೂಮಿ ಕಳೆದುಕೊಂಡರೆ ಮಾತ್ರ ಉದ್ಯೋಗ ಸೃಷ್ಠಿಯಾಗುತ್ತಿತ್ತು. ಆದರೆ ಭೂಮಿ ಕಳೆದುಕೊಳ್ಳದೆಯೂ ಉದ್ಯೋಗ ಸಿಗುವುದು ಹೇಗೆ ಎಂಬುದನ್ನು ಪ್ರಧಾನಿ ಮೋದಿ ತೋರಿಸಿಕೊಟ್ಟಿರುವುದಾಗಿ ಹೇಳಿದ್ದಾರೆ. ಅನ್ನದಾತರು ಭೂಮಿಯನ್ನು ಕಳೆದುಕೊಳ್ಳಲು ಬಿಡುವುದಿಲ್ಲ ಎಂದಿದ್ದಾರೆ.

 

 

Comments are closed.

Social Media Auto Publish Powered By : XYZScripts.com