ಈ ಚಿತ್ರದಲ್ಲಿ ಹ್ಯಾಂಡ್ಸಮ್ ಹಂಕ್ ರಣ್ವೀರ್ ಸಿಂಗ್ ಗಂಡಸರನ್ನೂ ಬಿಡಲ್ವಾ..?

ಬಾಲಿವುಡ್ ಕಲಾವಿದರು ಇತ್ತೀಚಿನ ದಿನಗಳಲ್ಲಿ ಭಿನ್ನ ವಿಭಿನ್ನ ಪಾತ್ರಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ.‌ ಸ್ವತಃ ಸ್ಟಾರ್ ಹೀರೋ, ಹೀರೋಯಿನ್ಸ್ ಪಾತ್ರ ಯಾವುದಾದ್ರೂ ನಾವು ಪರ್ಫೆಕ್ಷನ್ ತೋರಿಸ್ತೀವಿ ಅಂತ ಧೈರ್ಯವಾಗಿ ಮುಂದೆ ಬರ್ತಿದ್ದಾರೆ. ನೆಗೆಟೀವ್ ಶೇಡ್ ರೋಲ್ ಆದ್ರೂ ತಕ್ಷಣ ಓಕೆ ಅಂತಿದ್ದಾರೆ. ಇದೇ ರೀತಿ ಬಾಲಿವುಡ್ ನಟ ರಣ್ವೀರ್ ಸಿಂಗ್, ಪದ್ಮಾವತಿ ಚಿತ್ರದಲ್ಲಿ ಬೈಸೆಕ್ಸುವಲ್(ಸ್ತ್ರೀ, ಪುರುಷರ ಜೊತೆ ಲೈಂಗಿಕ ಸಂಪರ್ಕ) ಆಗಿ ಬದಲಾಗಿದ್ದಾನಂತೆ. ಈ ಚಿತ್ರದಲ್ಲಿ ರಣ್ವೀರ್ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ನಟಿಸ್ತಿದ್ದು, ಆ ಪಾತ್ರವನ್ನ ನಿರ್ದೇಶಕ ಬನ್ಸಾಲಿ ಈ ರೀತಿ ಚಿತ್ರಿಸಿದ್ದಾರೆ ಅನ್ನಲಾಗ್ತಿದೆ.
ತನ್ನ ಸೇವಕ ಮಾಲಿಕ್ ಕಫೂರ್ ಮೇಲೆ ಮೋಹ ಬೆಳೆಸಿಕೊಳ್ಳುವ ಅಲ್ಲಾವುದ್ದೀನ್ ಪಾತ್ರದಲ್ಲಿ ರಣ್ವೀರ್ ಅದ್ಭುತವಾಗಿ ನಟಿಸಿದ್ದಾನೆ ಅನ್ನೋ ಮಾತುಗಳು ಚಿತ್ರತಂಡದಿಂದ ಕೇಳಿಬಂದಿದೆ. ಮೊದಲು ಪದ್ಮಾವತಿ ಪ್ರೀತಿಯಲ್ಲಿ ಬೀಳೊ ಅಲ್ಲಾವುದ್ದೀನ್, ಆಕೆ ನಿರಾಕರಿಸಿದಾಗ ಆತ್ಮಹತ್ಯೆಗೂ ಯತ್ನ ನಡೆಸ್ತಾನಂತೆ. ಚಿತ್ರದಲ್ಲಿ ಮಾಲಿಕ್ ಕಫೂರ್ ಪಾತ್ರದಲ್ಲಿ ಜಿಮ್ ಸರ್ಭಾ ಕಾಣಿಸಿಕೊಂಡಿಸಿದ್ದಾನೆ ಅನ್ನಲಾಗ್ತಿದೆ.
ರಣ್ವೀರ್ ಸಿಂಗ್ ಇದೇ ಮೊದಲ ಬಾರಿಗೆ ಇಂತಾದೊಂದು ವಿಭಿನ್ನ ಪಾತ್ರದಲ್ಲಿ ನಟಿಸ್ತಿದ್ದು, ಚಿತ್ರದ ಬಗ್ಗೆ ಬಾಲಿವುಡ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮನೆ ಮಾಡಿದೆ. ಶಾಹಿದ್ ಕಪೂರ್, ರಾಜಾ ರಾವಲ್ ಸಿಂಗ್ ಪಾತ್ರದಲ್ಲಿ ಮಿಂಚಿದ್ದು, ದೀಪಿಕಾ ಪಡುಕೋಣೆ, ಪದ್ಮಾವತಿಯಾಗಿ ದರ್ಬಾರ್ ನಡೆಸೋಕೆ ಬರ್ತಿದ್ದಾಳೆ. ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿವೆ. ಅಲ್ಲದೆ ಇಂದು ಹೊರಬಿದ್ದಿರೋ ಟ್ರೇಲರ್ ನಲ್ಲಿ ಕೂಡ ರಣ್ವೀರ್ ಸಿಂಗ್ ಲುಕ್ ಹೈಲೈಟ್ ಆಗಿದೆ. ಅಂದ್ಹಾಗೆ  ಪದ್ಮಾವತಿ ಚಿತ್ರ ಡಿಸೆಂಬರ್ 1ಕ್ಕೆ ತೆರೆಗಪ್ಪಳಿಸಲಿದೆ.