ಅಯೋಧ್ಯೆಯಲ್ಲಿ 100 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ಪ್ರತಿಷ್ಠಾಪನೆಗೆ ಉತ್ತರ ಪ್ರದೇಶ ಸರ್ಕಾರ ನಿರ್ಧಾರ

ಲಖನೌ : ವಿವಾದಿತ ಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ 100 ಅಡಿ ಎತ್ತರದ ವಿಗ್ರಹ ಸ್ಥಾಪನೆಗೆ ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸಿದೆ. ಸರಯೂ ನದಿ ಬಳಿ ರಾಮನ ವಿಗ್ರಹ ಪ್ರತಿಷ್ಠಾಪಿಸುವ ಕುರಿತು ಯೋಗಿ ನೇತೃ್ವದ ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.

ಧಾರ್ಮಿಕ ಪ್ರವಾಸೋದ್ಯಮವನ್ನು ಬಲವರ್ಧನೆ ಮಾಡುವ ನಿಟ್ಟಿನಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆಗೆ ನಿರ್ಧರಿಸಿರುವುದಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆ, ಉತ್ತರ ಪ್ರದೇಶ ರಾಜ್ಯಪಾಲ ರಾಂ ನಾಯಕ್ ಅವರಿಗೆ ತಿಳಿಸಿದೆ.

ಇಂಡೋನೇಷ್ಯಾದ ಬಾಲಿಯಲ್ಲಿ ಈ ರೀತಿಯ ಪ್ರತಿಮೆಗಳನ್ನು ನಿರ್ಮಿಸಿದ್ದು, ಅದೇ ಮಾದರಿಯಲ್ಲಿ ಉತ್ತರ ಪ್ರದೇಶದಲ್ಲೂ ಪ್ರವಾಸೋದ್ಯಮ ವಲಯ ಅಭಿವೃದ್ಧಿ ಪಡಿಸು ಆಲೋಚನೆ ಇದೆ.ಮುಂದಿನ ವಾರ ಸಿಎಂ ಯೋಗಿ ಆದಿತ್ಯನಾಥ್‌ ಅಯೋಧ್ಯೆಗೆ ದೀಪಾವಳಿ ಆಚರಣೆಗಾಗಿ ತೆರಳಲಿದ್ದಾರೆ. ದೀಪಾವಳಿಯ ಹಿಂದಿನ ದಿನ ಸರಯೂ ನದಿ ತೀರದಲ್ಲಿ ಆರತಿ ಆಯೋಜನೆಗಾಗಿ ಸಿದ್ದತೆ ನಡೆದಿದೆ.

 

Social Media Auto Publish Powered By : XYZScripts.com