JeM ಉಗ್ರ ಖಾಲಿದ್ ಎನ್ಕೌಂಟರ್ : ಮೋಸ ಹೋದ ಪ್ರೇಯಸಿ ನೀಡಿದ ಮಾಹಿತಿಯೇ ಕಾರಣ..!?

ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ‘ ಜೈಶ್ ಎ ಮೊಹಮ್ಮದ್ ‘ ಸಂಘಟನೆಯ ಪ್ರಮುಖ ಉಗ್ರರಲ್ಲಿ ಒಬ್ಬನಾಗಿದ್ದ ಶಾಹಿದ್ ಶೌಕತ್ ಅಲಿ ಅಲಿಯಾಸ್ ಖಾಲಿದ್ ನನ್ನು ಸೋಮವಾರ ರಕ್ಷಣಾ ಪಡೆಗಳು ಎನ್ಕೌಂಟರ್ ನಲ್ಲಿ ಹೊಡೆದುರುಳಿಸಿವೆ. ಖಾಲಿದ್ ಕಾಶ್ಮೀರದಲ್ಲಿ ನಡೆದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಯ ರೂವಾರಿಯಾಗಿದ್ದ.

ಕಳೆದ ವಾರ ಶ್ರೀನಗರ ವಿಮಾನ ನಿಲ್ದಾಣದಲ್ಲಿ ನಡೆದ ದಾಳಿಯಲ್ಲಿ ಸೈನಿಕನೊಬ್ಬ ಸಾವನ್ನಪ್ಪಿದ್ದ. ಇದರ ಹಿಂದೆಯೂ ಖಾಲಿದ್ ಕೈವಾಡವಿದೆಯೆಂದು ಶಂಕಿಸಲಾಗಿದೆ. ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟದಲ್ಲಿ ಖಾಲಿದ್ ಎನ್ಕೌಂಟರ್ ಮಹತ್ವದ್ದೆಂದು ತಿಳಿಯಲಾಗುತ್ತಿದೆ.

Image result for khalid JeM

ಖಾಲಿದ್ ಜೈಶ್ ಎ ಮೊಹಮ್ಮದ್ ನ 3-4 ಫಿದಾಯೀನ್ (ಆತ್ಮಾಹುತಿ) ಗಳ ಸಹಾಯದೊಂದಿಗೆ ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದ ಉಗ್ರ ದಾಳಿ ನಡೆಸುವ ಹುನ್ನಾರದಲ್ಲಿದ್ದ. ಖಾಲಿದ್ ಬಗ್ಗೆ ಆತನಿಂದ ಮೋಸ ಹೋದ ಮಾಜಿ ಪ್ರೇಯಸಿ ನೀಡಿದ ಗುಪ್ತ ಮಾಹಿತಿಯನ್ನಾಧರಿಸಿ ರಕ್ಷಣಾ ಪಡೆಗಳು ಅವನ ಎನ್ಕೌಂಟರ್ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಈ ಮೊದಲು ಹತನಾಗಿದ್ದ ಅಬು ದುಜಾನಾನಂತೆ ಈತನಿಗೂ ಹಲವು ಸ್ಥಳೀಯ ಕಾಶ್ಮೀರಿ ಮಹಿಳೆಯರೊಂದಿಗೆ ಅಫೇರ್ ಇತ್ತೆಂದು ಶಂಕಿಸಲಾಗಿದೆ. ತನ್ನನ್ನು ಬಿಟ್ಟು ಇನ್ನೊಬ್ಬಾಕೆಯ ಮೇಲೆ ಆತನಿಗೆ ಆಸಕ್ತಿ ಬೆಳೆದಿದೆಯೆಂದು ತಿಳಿದ ಮಾಜಿ ಪ್ರೇಯಸಿ, ರಕ್ಷಣಾ ಪಡೆಗಳಿಗೆ ಆತನಿರುವ ಜಾಗದ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿದ್ದಾಳೆ. ಎನ್ಕೌಂಟರ್ ನಡೆದ ದಿನ ಆತನಿಗೆ ಮೆಸೇಜ್ ಮಾಡಿ ಭೇಟಿಯಾಗಲು ಬರುವಂತೆ ತಿಳಿಸಿದ್ದಾಳೆ. ಆಕೆಯನ್ನು ಭೇಟಿಯಾಗಲು ಬಂದ ಖಾಲಿದ್, ಅಲ್ಲಿ ಹೊಂಚು ಹಾಕಿ ಕುಳಿತಿದ್ದ ರಕ್ಷಣಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.

Social Media Auto Publish Powered By : XYZScripts.com