ಹಿಂದುಗಳು ಭಯಪಡಬೇಡಿ, ತಮ್ಮ ಮನೆಯಲ್ಲಿ ಕತ್ತಿ, ತಲ್ವಾರ್‌ ಇಟ್ಟುಕೊಳ್ಳಿ : ಮುತಾಲಿಕ್‌

ಮಂಗಳೂರು : ನಮ್ಮ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹಿಂದೂಗಳು ತಮ್ಮ ಮನೆಯಲ್ಲಿ ಕತ್ತಿ, ತಲ್ವಾರ್‌ ಇಟ್ಟುಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್ ಹೇಳಿದ್ದಾರೆ.

ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಶ್ರೀರಾಮಸೇನೆ ಹಾಗೂ ಮಹಿಳಾ ಘಟಕ ದುರ್ಗಾ ಸೇನೆ ವತಿಯಂದ ಆಯೋಜಿಸಲಾಗಿದ್ದ ಮಾತೃಪೂಜನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯುಧವೆಂದರೆ ಪೆನ್ನು, ಪುಸ್ತಕಗಳಲ್ಲ. ಕತ್ತಿ, ತಲ್ವಾರ್‌ ಮುಂತಾದವು. ಪ್ರತಿಯೊಬ್ಬ ಹಿಂದೂಗಳೂ ಅದನ್ನು ಆಯುಧವನ್ನಾಗಿ ಇಟ್ಟುಕೊಂಡಿರಬೇಕು ಎಂದಿದ್ದಾರೆ. ಎಲ್ಲ ಭಯವನ್ನು ಬಿಟ್ಟು ಪ್ರತಿಯೊಬ್ಬ ಹಿಂದೂ ಸಹ ದೇಶ ರಕ್ಷಣೆಗಾಗಿ  ಕತ್ತಿ, ತಲ್ವಾರ್‌ ಬಳಸಿ ಎಂದಿದ್ದಾರೆ. ಇದಕ್ಕೆ ಸಚಿವ ರಮಾನಾಥ ರೈ ಪ್ರತಿಕ್ರಿಯಿಸಿದ್ದು, ಯಾವನು ಅವನು ಮುತಾಲಿಕ್‌, ಅವನೊಬ್ಬ ದಾರಿಹೋಕ. ನಾಯಕತ್ವ ಪಟ್ಟಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.