ರಾಜ್ಯದಲ್ಲೂ ಜನರಕ್ಷಾಯಾತ್ರೆಗೆ ಬೆಂಬಲ : ಬಿಎಸ್‌ವೈ ಸೇರಿದಂತೆ ಹಲವರ ಬಂಧನ

ಬೆಂಗಳೂರು : ಕೇರಳದಲ್ಲಿ ನಡೆದ ಜನರಕ್ಷಾ ಯಾತ್ರೆಗೆ ಕರ್ನಾಟಕದಲ್ಲೂ ಬೆಂಬಲ ವ್ಯಕ್ತವಾಗಿದ್ದು, ರಾಜ್ಯ ಬಿಜೆಪಿ ಘಟಕ ಸೋಮವಾರ ಪಾದಯಾತ್ರೆ ಮೂಲಕ ಬಸವನಗುಡಿಯ ಸಿಪಿಎಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಡಿಸಿಎಂ. ಆರ್‌ ಅಶೋಕ್‌ , ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಚಾಲನೆ ನೀಡಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ನಡೆದ ಜನರಕ್ಷಾ ಯಾತ್ರೆಯನ್ನು ಕರ್ನಾಟಕದ ರಾಜ್ಯ ಬಿಜೆಪಿ ಘಟಕ ಬೆಂಬಲಿಸಿ ಬಿಎಸ್‌ವೈ ಹಾಗೂ ಅಶೋಕ್ ಕುಮಾರ್ ನೇತೃತ್ವದಲ್ಲಿ ಸಿಪಿಎಂ ಕಚೇರಿಗೆ ಮುತ್ತಿಗೆ ಹಾಕಲು ಪಾದಯಾತ್ರೆ ನಡೆಸಿತ್ತು. ಈ ವೇಳೆ ಕಮ್ಯುನಿಷ್ಟರ ಹಿಂಸಾಚಾರ ಕೊನೆಗೊಳ್ಳಲಿ. ಕಮ್ಯುನಿಸ್ಟ್ ಗೂಂಡಾಗಿರಿ ನಿಲ್ಲಲಿ ಎಂದು ಘೋಷಣೆ ಕೂಗುತ್ತಾ ಸಾಗುತ್ತಿದ್ದರು. ಅಲ್ಲದೆ ಎಲ್ಇಡಿ ಪರದೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರ ಹತ್ಯೆ ದೃಶ್ಯವನ್ನು ಪ್ರದರ್ಶಿಸಲಾಗುತ್ತಿತ್ತು. ಈ ವೇಳೆ ಪೊಲೀಸರು ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರನ್ನು ಬಂಧಿಸಿದ್ದಾರೆ.

Comments are closed.

Social Media Auto Publish Powered By : XYZScripts.com