ಕತಾರ್ ನ ದೋಹಾದಲ್ಲಿ ಅಕ್ಟೋಬರ್ 13ರಿಂದ ಕಾಫಿತೋಟ ಪ್ರದರ್ಶನ

ಕತಾರ್: ಇಲ್ಲಿನ ರಾಜಧಾನಿ ದೋಹಾದಲ್ಲಿ ಬರುವ ಅಕ್ಟೋಬರ್ ೧೩ ರಂದುಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ನಿರ್ದೇಶನದ ‘ ಕಾಫಿ ತೋಟ ’ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಇದೇ ಪ್ರಥಮ ಬಾರಿಗೆ ಚಿತ್ರದ ನಾಯಕ ಪ್ಯಾರೀಸ್ ಪ್ರಣಯ,ಸವಾರಿ ಹಾಗು ಕಾಫಿತೋಟ ಚಿತ್ರಗಳಲ್ಲಿ ನಟಿಸಿರೋ  ರಘು ಮುಖರ್ಜಿ ಮತ್ತು ನಾಯಕಿಯರಾದ ರಂಗಿ ತರಂಗ ಖ್ಯಾತಿಯ ರಾಧಿಕ ಚೇತನ್  ಹಾಗು ನವ ನಟಿ ಅಪೇಕ್ಷಾ ಪುರೋಹಿತ್ ಅವರುಗಳು ಪಯಣ ಬೆಳೆಸಲಿದ್ದಾರೆ.
 
ಕೇವಲ ಒಂದು ವರ್ಷದ ಅವಧಿಯಲ್ಲಿ ರಂಗಿತರಂಗಹೆಬ್ಬುಲಿಕೋಟಿಗೊಬ್ಬ-ರಾಜಕುಮಾರಚೌಕಕಿರಿಕ್ ಪಾರ್ಟಿದೊಡ್ಮನೆ ಹುಡ್ಗ ಮತ್ತು ಒಂದು ಮೊಟ್ಟೆಯ ಕಥೆ ಚಲನಚಿತ್ರ ಗಳು ಹಾಗು ತುಳು ಚಿತ್ರ ಅರೈಮರ್ಲೆರ್ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ.  ಮುಖ್ಯ ಆಯೋಜಕರಾದ ಸುಬ್ರಮ್ಮಣ್ಯ ಹೆಬ್ಬಾಗಿಲು ಕತಾರ್ ನಲ್ಲಿರೋ ಕನ್ನಡಿಗರಿಗೆ  ಕನ್ನಡ ಸಿನಿಮಾಗಳನ್ನ ತೋರಿಸುವ ಸಲುವಾಗಿ ಈ ಬಾರಿ ಸದಾಭಿರುಚಿಯ ಚಿತ್ರ ಕಾಫಿತೋಟ ಪ್ರದರ್ಶಿಸಲಿದ್ದಾರೆ.

Comments are closed.

Social Media Auto Publish Powered By : XYZScripts.com