ಪ್ರಶಸ್ತಿ ವಾಪಸ್‌ ಮಾಡುವುದಾದರೆ, ಪ್ರಶಸ್ತಿ ಸ್ವೀಕರಿಸುವುದಾದರೂ ಏಕೆ : ಪ್ರಕಾಶ್‌ ರಾಜ್‌ಗೆ ಸದಾನಂದಗೌಡ ಪ್ರಶ್ನೆ

ದೆಹಲಿ : ಪ್ರಶಸ್ತಿ ವಾಪಸ್‌ ಮಾಡುವುದಾದರೆ ಪ್ರಶಸ್ತಿಯನ್ನು ಸ್ವೀಕರಿಸುವುದು ಏಕೆ ಎಂದು ನಟ ಪ್ರಕಾಶ್‌ ರಾಜ್‌  ಅವರಿಗೆ ಕೇಂದ್ರ ಸಚಿವ ಸದಾನಂದಗೌಡ ಪ್ರಶ್ನಿಸಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಸಂಬಂಧ ಪ್ರಧಾನಿ ಮೋದಿ ನನಗಿಂತ ದೊಡ್ಡ ನಟ ಎಂದಿದ್ದರು. ಜೊತೆಗೆ ಮೋದಿ ಬೆಂಬಲಿಗರೇ ಗೌರಿ ಹತ್ಯೆಯನ್ನು ಸಂಭ್ರಮಿಸಿದ್ದು, ಅವರನ್ನೆಲ್ಲ ಮೋದಿ ಫಾಲೋ ಮಾಡುತ್ತಿದ್ದಾರೆ. ಆದ್ದರಿಂದ ನನ್ನೆಲ್ಲ ಪ್ರಶಸ್ತಿಗಳನ್ನು ಅವರಿಗೇ ಕೊಡಬೇಕೆನಿಸುತ್ತದೆ ಎಂದಿದ್ದರು.

ಪ್ರಕಾಶ್ ರಾಜ್‌ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಆದರೆ ನಾನು ಪ್ರಶಸ್ತಿ ವಾಪಸ್ ಮಾಡುವಷ್ಟು ದೊಡ್ಡ ಮೂರ್ಖನಲ್ಲ. ನಾನೊಬ್ಬ ಭಾರತೀಯ ನಾಗರಿಕನಾಗಿ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದೆ. ಆದರೆ ನನ್ನ ಪ್ರಶಸ್ತಿ ವಾಪಸ್‌ ನೀಡುವುದಾಗಿ ನಾನು ಹೇಳಿರಲಿಲ್ಲ. ಹಾಗೆ ಮಾಡಲು ನಾನು ಮೂರ್ಖನಲ್ಲ ಎಂದಿದ್ದರು.

ಈ ಕುರಿತು ಹೇಳಿಕೆ ನೀಡಿರುವ ಸದಾನಂದಗೌಡರು, ಸಂದ ಪ್ರಶಸ್ತಿಗಳನ್ನು ವಾಪಸ್‌ ನೀಡುವುದೇ ಆದರೆ ಮೊದಲ ಸಾಲಿನಲ್ಲಿ ನಿಂತು ಪ್ರಶಸ್ತಿ ಸ್ವೀಕರಿಸುವುದಾದರೂ ಏಕೆ ಎಂದು ಪ್ರಶ್ನಿಸಿದ್ದಾರೆ.

 

 

 

Social Media Auto Publish Powered By : XYZScripts.com