ಕೇಂದ್ರದಿಂದ ಕರ್ನಾಟಕಕ್ಕೆ ಮತ್ತೊಂದು ಶಾಕ್ : ಮೈಸೂರಿನಲ್ಲಿರುವ ಜರ್ಮನ್ ಪ್ರೆಸ್‌ ಮುಚ್ಚಲು ನಿರ್ಧಾರ

ದೆಹಲಿ : ಕರ್ನಾಟಕದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆಯುತ್ತಿದೆ ಎಂದು ಜನ ಆಕ್ರೋಶ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿರುವ ಜರ್ಮನ್‌ ಪ್ರೆಸ್‌ ಮುಚ್ಚಿ ಮಹಾರಾಷ್ಟ್ರದ ನಾಸಿಕ್‌ ಪ್ರೆಸ್‌ ಜೊತೆ ವಿಲೀನ ಮಾಡಲು ನಿರ್ಧರಿಸಿದ್ದು, ಈ ಮೂಲಕ ಕರ್ನಾಟಕಕ್ಕೆ ಶಾಕ್‌ ನೀಡಿದೆ.

ಉತ್ತರ ಭಾರತದ ಪ್ರೆಸ್‌ಗಳನ್ನು ಉಳಿಸಿಕೊಂಡು ದಕ್ಷಿಣದ ಪ್ರೆಸ್‌ಗಳನ್ನು ಮುಚ್ಚಲು ನಿರ್ಧರಿಸಿದ್ದು, ಉತ್ತರ ಭಾಗದ ಪ್ರೆಸ್‌ಗಳಿಗೆ ಆಧುನಿಕ ಟಚ್‌ ನೀಡಲು ಹೊರಟಿದೆ.

1976ರಲ್ಲಿ ಭಾರತಕ್ಕೆ ಜರ್ಮನ್ ಸಂಸ್ಥೆ ಈ ಪ್ರೆಸ್‌ನ್ನು ಉಡುಗೊರೆಯಾಗಿ ನೀಡಿತ್ತು. ಈಗ ಜರ್ಮನ್‌ ಪ್ರೆಸ್‌ ಮುಚ್ಚುವ ಕೇಂದ್ರ ಸರ್ಕಾರದ ನಿರ್ಧಾರದಿಂದ 27 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಈ ವಿಚಾರ ಸಂಬಂದ ನೌಕರರು ಪ್ರತಿಭಟನೆ ನಡೆಸುತ್ತಿದ್ದರೂ  ಸಂಸದ ಪ್ರತಾಪ್‌ ಸಿಂಹ ಮಾತ್ರ ಮೌನ ವಹಿಸಿದ್ದಾರೆ.