ಜಿಯೋಗೆ ಸೆಡ್ಡು ಹೊಡೆಯಲು ಬಿಎಸ್ಎನ್ಎಲ್ನಿಂದ ಭರ್ಜರಿ ಆಫರ್………
ಜಿಯೋ ಬಂದ ನಂತರ ಎಲ್ಲಾ ಮೊಬೈಲ್ ಕಂಪನಿಗಳು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಇತ್ತೀಚಿಗೆ ಜಿಯೋಗೆ ಸೆಡ್ಡು ಹೊಡೆಯಲು ಅನೇಕ ಕಂಪನಿಗಳು ಸಾಕಷ್ಟು ಹರಸಾಹಸ ಪಡುತ್ತಿದ್ದು, ಗ್ರಾಹಕರಿಗೆ ಹೊಸ ಹೊಸ ಆಫರ್ಗಳನ್ನು ನೀಡುತ್ತಿವೆ.
ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗ ಬಿಎಸ್ಎನ್ಎಲ್ ಸಹ ಮುಂದೆ ಬಂದಿದ್ದು, ಇದೀಗ 2 ಹೊಸ ಆಫರ್ಗಳನ್ನು ಬಿಡುಗಡೆ ಮಾಡಿದೆ. 249 ರೂ ಗಳ ಪ್ಲಾನ್ ಹಾಗೂ 429 ರೂಗಳ ಪ್ಲಾನ್. 249 ರೂ ರಿಚಾರ್ಜ್ ಮಾಡಿಸಿದರೆ ಪ್ರತಿದಿನ 1 ಜಿಬಿ 3ಜಿ ಡೇಟಾ ಸಿಗುತ್ತದೆ. ಜೊತೆಗೆ ಬಿಎಸ್ಎನ್ಎಲ್ ಟು ಬಿಎಸ್ಎನ್ಎಲ್ ಫ್ರೀ ಕಾಲ್ ಸಹ ನೀಡಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ.
ಇನ್ನು 429 ರೂಗಳ ರೀಚಾರ್ಜ್ ಮಾಡಿಸಿಕೊಂಡರೆ ಪ್ರತಿದಿನ 1 ಜಿಬಿ ಮತ್ತು ಎಲ್ಲಾ ನೆಟ್ವರ್ಕ್ಗಳಿಗೂ ಉಚಿತ ಕಾಲ್ ಮಾಡಬಹುದಾಗಿದೆ. ಇದು 90 ದಿನಗಳ ವ್ಯಾಲಿಡಿಟಿ ಹೊಂದಿದೆ. ೌ
Comments are closed.