ಧೋನಿ ಮಹಾನ್ ಕ್ರಿಕೆಟರ್ ಆಗಲು ಈ ವ್ಯಕ್ತಿಯ ತ್ಯಾಗವೇ ಕಾರಣ : ವೀರು ಹೇಳಿದ ಗುಟ್ಟೇನು..?

ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಕಂಡ ಶ್ರೇಷ್ಟ ನಾಯಕರಲ್ಲಿ ಒಬ್ಬರು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಒಬ್ಬ ಬ್ಯಾಟ್ಸಮನ್ , ವಿಕೆಟ್ ಕೀಪರ್ ಹಾಗೂ ಕ್ಯಾಪ್ಟನ್ ಆಗಿ ಮೂರು ಕ್ಷೇತ್ರಗಳಲ್ಲೂ ಧೋನಿ ಯಶ್ವಸ್ವಿಯಾಗಿ ಮಿಂಚಿದ್ದಾರೆ. ಧೋನಿ ಇಷ್ಟು ದೊಡ್ಡ ಕ್ರಿಕೆಟರ್ ಆಗಿ ರೂಪುಗೊಳ್ಳುವುದರ ಹಿಂದಿನ ಕಾರಣ ಏನೆಂದು ಮಾಜಿ ಆರಂಭಿಕ ಆಟಗಾರ ವೀರೆಂದ್ರ ಸೆಹ್ವಾಗ್ ಹೇಳಿದ್ದಾರೆ.

Image result for sourav ganguly dhoni

‘ಆಗ ನಾವು ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗಗಳನ್ನು ಮಾಡುತ್ತಿದ್ದೆವು. ಮೊದಲನೇ ವಿಕೆಟ್ ಗೆ ನನ್ನ ಹಾಗೂ ಸಚಿನ್ ಜೊತೆಯಾಟದಿಂದ ಉತ್ತಮ ಆರಂಭ ದೊರೆತರೆ, ಗಂಗೂಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುವುದೆಂದು ನಿರ್ಧರಿಸಿದ್ದೆವು. ಒಂದು ವೇಳೆ ಮೊದಲ ವಿಕೆಟ್ ಬೇಗ ಕಳೆದುಕೊಂಡು ಒಳ್ಳೆಯ ಆರಂಭ ಸಿಗದಿದ್ದರೆ, ರನ್ ರೇಟ್ ಹೆಚ್ಚಿಸಲು ಧೋನಿ ಅಥವಾ ಇರ್ಫಾನ್ ರಂತಹ ಪಿಂಚ್ ಹಿಟರ್ ಗಳನ್ನು 3ನೇ ಕ್ರಮಾಂಕದಲ್ಲಿ ಆಡಿಸಬೇಕು ಎಂದು ಯೋಚಿಸಿದ್ದೆವು ‘ ಎಂದು ವೀರೂ ಹೇಳಿದ್ದಾರೆ.

Image result for dhoni 183

 

‘ 3-4 ಪಂದ್ಯಗಳಲ್ಲಿ ಧೋನಿಯನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಕಳುಹಿಸಲು ಗಂಗೂಲಿ ನಿರ್ಧರಿಸಿದ್ದರು. ತಂಡದ ಹಿತದೃಷ್ಟಿಯಿಂದ ತನ್ನ ಬ್ಯಾಟಿಂಗ್ ಸ್ಥಾನವನ್ನು ಮತ್ತೊಬ್ಬರಿಗೆ ಬಿಟ್ಟುಕೊಡುವ ನಾಯಕರು ತುಂಬ ಅಪರೂಪ. ನನಗಾಗಿ ಸೌರವ್ ತಮ್ಮ ಓಪನಿಂಗ್ ಸ್ಥಾನವನ್ನು ಬಿಟ್ಟಿದ್ದರು. ಹಾಗೆಯೇ ಧೋನಿಗಾಗಿ ನಂ.3 ಸ್ಥಾನವನ್ನು ತ್ಯಾಗ ಮಾಡಿದ ಸಲುವಾಗಿಯೇ ಧೋನಿ ಇಂದು ಇಷ್ಟು ದೊಡ್ಡ ಕ್ರಿಕೆಟರ್ ಆಗಿ ಬೆಳೆಯಲು ಸಾಧ್ಯವಾಯಿತು ‘

Image result for dhoni vs pakistan visakhapatnam

‘ ಹೊಸ ಆಟಗಾರರಿಗೆ ಅವಕಾಶ ನೀಡುವುದರಲ್ಲಿ ದಾದಾ ವಿಶ್ವಾಸವಿಟ್ಟಿದ್ದರು. ಧೋನಿ ಯಶಸ್ಸಿನ ಹಿಂದೆ ಗಂಗೂಲಿ ನಂತರ ನಾಯಕತ್ವ ವಹಿಸಿಕೊಂಡ ರಾಹುಲ್ ದ್ರಾವಿಡ್ ಅವರ ಪಾತ್ರವೂ ಇದೆ. ಧೋನಿಗೆ ಫಿನಿಷರ್ ಸ್ಥಾನವನ್ನು ದ್ರಾವಿಡ್ ನೀಡಿದ್ದರಿಂದ ಅವರೊಬ್ಬ ಗ್ರೇಟ್ ಫಿನಿಷರ್ ಆಗಿ ರೂಪುಗೊಳ್ಳಲು ಸಾಧ್ಯವಾಯಿತು ‘ ಎಂದು ಸೆಹ್ವಾಗ್ ಹೇಳಿದ್ದಾರೆ.

 

2005 ರಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿದ ಧೋನಿ, ವಿಶಾಖಪಟ್ಟಣಂನಲ್ಲಿ ಪಾಕ್ ವಿರುದ್ಧ 148 ಹಾಗೂ ಜೈಪುರದಲ್ಲಿ ಶ್ರೀಲಂಕಾ ವಿರುದ್ಧ 183 ರನ್ ಬಾರಿಸಿ ದೇಶದ ಮನೆಮಾತಾಗಿದ್ದರು.

One thought on “ಧೋನಿ ಮಹಾನ್ ಕ್ರಿಕೆಟರ್ ಆಗಲು ಈ ವ್ಯಕ್ತಿಯ ತ್ಯಾಗವೇ ಕಾರಣ : ವೀರು ಹೇಳಿದ ಗುಟ್ಟೇನು..?

  • October 24, 2017 at 4:09 PM
    Permalink

    I don’t even know how I ended up here, but I thought this post was good.
    I don’t know who you are but certainly you are going to a famous blogger if you are not already 😉 Cheers!

Comments are closed.

Social Media Auto Publish Powered By : XYZScripts.com