ಶಿವನ ಅನುಗ್ರಹ, ತಾಯ್ನಾಡಿನ ಪ್ರೀತಿಯಿಂದ ವಿಷವನ್ನೂ ಜೀರ್ಣಿಸಿಕೊಂಡಿದ್ದೇನೆ : ಮೋದಿ

ವಡ್ನಾಗರ್‌ : ಇದು ನನ್ನ ತವರು. ನನ್ನ ತವರಿನ ಜನ ನನ್ನ ಮೇಲಿಟ್ಟಿರುವ ಅಗಾಧ ಪ್ರೀತಿ ವಿಶ್ವಾಸ ನನಗೆ ದೇಶಸೇವೆ ಮಾಡಲು ಹೊಸ ಚೈತನ್ಯ ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ತಮ್ಮ ಹುಟ್ಟೂರಾದ ವಡ್ನಾಗರ್‌ಗೆ ಭೇಟಿ ನೀಡಿದ ಮೋದಿ, ತವರಿನ ಜನ ನನ್ನ ಮೇಲಿಟ್ಟಿರುವ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಋಣಿಯಾಗಿರುತ್ತೇನೆ ಎಂದಿದ್ದಾರೆ.

ಗುಜರಾತ್‌ನಲ್ಲಿ ಎರಡು ದಿನಗಳ ಪ್ರವಾಸ ಹಮ್ಮಿಕೊಂಡಿರುವ ಮೋದಿ ಕೊನೆಯ ದಿನವಾದ ಇಂದು ವಡ್ನಾಗರ್‌ಗೆ ಭೇಟಿ ನೀಡಿದ್ದರು. ಈ ವೇಳೆ ತಾವು ಓದಿದ ಶಾಲೆಗೆ ಶಿರಬಾಗಿ ನಮನ ಸಲ್ಲಿಸಿ ಅಲ್ಲಿನ ಮಣ್ಣಿನ ತಿಲಕವನ್ನು ಹಣೆಗೆ ಇಟ್ಟುಕೊಂಡರು. ಬಳಿಕ ಶಾಲೆಯ ಒಳಗೆ ತೆರಳಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು. ಬಳಿಕ ದೇವಸ್ಥಾನಕ್ಕೆ ತೆರಳಿ ದೇವರ ಆಶೀರ್ವಾದ ಪಡೆದರು. ಬಳಿಕ ವಡ್ನಾಗರ್‌ನಲ್ಲಿ 500ಕೋಟಿ ವೆಚ್ಚದಲ್ಲಿ ಸ್ಥಾಪಿಸಿರುವ ಜಿಎಂಇಆರ್‌ಎಸ್‌ ಆಸ್ಪತ್ರೆ ಮೆಡಿಕಲ್‌ ಕಾಲೇಜು ಉದ್ಘಾಟಿಸಿದರು.

ಜನರ ಜೊತೆ ರೋಡ್‌ ಶೋ ನಡೆಸಿದ ಮೋದಿ, ಜನರೊಂದಿಗೆ ಬೆರೆತು ಭಾವುಕರಾದರು. ವಡ್ನಾಗರ್‌ನಲ್ಲಿ ನನ್ನ ಮೇಲೆ ಜನ ಇಷ್ಟು ನಂಬಿಕೆ ಇಟ್ಟಿದ್ದಾರೆ. ಅವರ ಪ್ರೀತಿಗೆ ಹೃದಯ ತುಂಬಿ ಬಂದಿದೆ. ನಿಮ್ಮ ಪ್ರೀತಿಗೆ ನಾನು ಚಿರಋಣಿ ಎಂದರು.

 

ನನ್ನ ವಿರುದ್ದ ಅನೇಕರು ವಿಷ ಕಾರುತ್ತಿದ್ದರೂ, ಶಿವ ನನಗೆ ಶಕ್ತಿ ನೀಡಿದ್ದಾನೆ. ಭೋಲೇ ಬಾಬಾನ ಆಶಿರ್ವಾದವೇ ನನಗೆ ಈ ವಿಷವನ್ನು ಅರಗಿಸಿಕೊಳ್ಳುವ ಶಕ್ತಿ ನೀಡಿದೆ. ಆ ಶಕ್ತಿಯಿಂದಲೇ ನಾನು ನನ್ನ ತಾಯ್ನಾಡಿನ ಸೇವೆ ಮಾಡುತ್ತಿದ್ದೇನೆ ಎಂದಿದ್ದಾರೆ.

 

 

 

Comments are closed.

Social Media Auto Publish Powered By : XYZScripts.com