ಶೌಚಾಲಯಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ : ಕೊಪ್ಪಳದಲ್ಲೊಂದು ವಿಚಿತ್ರ ಘಟನೆ

ಕೊಪ್ಪಳ : ಶೌಚಾಲಯಕ್ಕಾಗಿ ನಡೆದ ಎರಡು ಕುಟುಂಬಗಳ ನಡುವಿನ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಶೌಚಾಲಯ ಕಟ್ಟಿಸೋ ವಿಚಾರವಾಗಿ ಹಿಟ್ನಾಳ ಗ್ರಾಮದ ಎರಡು ಕುಟುಂಬದ ಮಧ್ಯೆ ವಿವಾದವಿತ್ತು.ಇದೀಗ ವಿವಾದದಲ್ಲಿ 52 ವರ್ಷದ ಭೀಮಪ್ಪ ಅರಕೇರಿ ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾನೆ.

ನಿನ್ನೆ ಭೀಮಪ್ಪ ಅರಕೇರಿ ತನ್ನ ಮನೆ ಮುಂದೆ ಶೌಚಾಲಯದ ಕಾಮಗಾರಿ ನಡೆಸಿದ್ದ.ಈ ಸಂದರ್ಭದಲ್ಲಿ ಪಕ್ಕದ ಮನೆಯ ಸಿದ್ದಲಿಂಗಪ್ಪ ಹಾಗೂ ಭೀಮಪ್ಪ ಕುಟುಂಬದ ನಡುವೆ ಗಲಾಟೆ ನಡೆದಿದೆ.ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ಹೋಗಿ ಮಾಜಿ ಎ.ಪಿ.ಎಮ್.ಸಿ ಅಧ್ಯಕ್ಷ ಸಿದ್ದಲಿಂಗಪ್ಪ ಕುಟುಂಬದವರಾದ ಮಲ್ಲಪ್ಪ,ಕೃಷ್ಣಪ್ಪ ಹಾಗೂ ಸಿದ್ದಲಿಂಗಪ್ಪ ತಂದೆ ಬೆಟದಪ್ಪ ಭೀಮಪ್ಪ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಮನನೊಂದ ಬೀಮಪ್ಪ ನಿನ್ನೆ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಸೇವಿಸಿದ್ದಾನೆ.

ಕಳೆದ ಮೂರು ವರ್ಷದಿಂದ ಎರಡು ಕುಟುಂಬದ ಮಧ್ಯೆ ಸ್ಥಳದ ಸಂಬಂಧ ವಿವಾದ ಇತ್ತು. ನಿನ್ನೆ ವಿವಾದ ವಿಕೋಪಕ್ಕೆ ಹೋಗಿ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ. ಹಲ್ಲೆ ಮಾಡಿದ ಸಿದ್ದ್ಲಲಿಂಗಪ್ಪ ಕುಟುಂಬದವರು ಹಿಟ್ನಾಳ ಗ್ರಾಮದಿಂದ ಪರಾರಿಯಾಗಿದ್ದಾರೆ.

One thought on “ಶೌಚಾಲಯಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ : ಕೊಪ್ಪಳದಲ್ಲೊಂದು ವಿಚಿತ್ರ ಘಟನೆ

 • October 24, 2017 at 3:33 PM
  Permalink

  I do not know whether it’s just me or if perhaps everyone else encountering problems with your site.

  It seems like some of the written text within your content are running off the screen. Can somebody else please provide feedback and let me know if this is happening to them as well?
  This could be a problem with my web browser because I’ve had this happen previously.
  Cheers

Comments are closed.