ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದಯೇ, ಅತಿಯಾದ ಔಷಧ ಕಾರಣ ….!

ನಾನು ನಾರ್ಮಲ್– ಸಹಜವಾಗಿದ್ದೇನೆ ಎಂದು ತಿಳಿಯುವುದು ಹೇಗೆ?
ನಮ್ಮಲ್ಲಿ ಬಹುಪಾಲು ಜನರು ಲೈಂಗಿಕತೆ ಕೆಟ್ಟದ್ದು ಎಂಬ ವಾತಾವರಣದಲ್ಲಿಯೇ ಬಾಲ್ಯವನ್ನು ಕಳೆದಿರುತ್ತೇವೆ. ನಮ್ಮ ಶಾರೀರಿಕ ಅಗತ್ಯಗಳನ್ನು ಕುರಿತು ಚರ್ಚಿಸುವುದು ತಪ್ಪು ಎಂಬ ಮನೋಧರ್ಮವೂ ನಮ್ಮ ಪರಿಸರದಲ್ಲಿ ಸಹಜ. ಹೀಗಾಗಿ ಹಲವರಿಗೆ ಅವರ ಶಾರೀರಿಕ ಸೆಳೆತಗಳು, ಆಸೆಗಳು, ಕಲ್ಪನೆಗಳ ಬಗ್ಗೆ ಅನುಮಾನಗಳು ಕಾಡುವುದು ಸಹಜ. ‘ನಾನು ಸಹಜವಾಗಿದ್ದೇನೆಯೆ?’ – ಎಂಬ ಪ್ರಶ್ನೆಗೆ ಉತ್ತರ ‘ಹೌದು’. ಎಲ್ಲಿಯವರೆಗೂ ನಿಮ್ಮ ಲೈಂಗಿಕ ಜೀವನ ನಿಮಗಾಗಲೀ ಇತರರಿಗಾಗಲೀ ತೊಂದರೆಯನ್ನು ಕೊಡುತ್ತಿಲ್ಲವೋ ಅಲ್ಲಿಯ ತನಕ ನೀವು ಆತಂಕಿತರಾಗಬೇಕಿಲ್ಲ. ನಿಮ್ಮ ಆಸೆಗಳ ಬಗ್ಗೆಯಾಗಲೀ, ನಿಮ್ಮ ಜನನೇಂದ್ರಿಯಗಳ ಬಗ್ಗೆಯಾಗಲೀ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ಅವು ನಿಮ್ಮ ಮತ್ತು ನಿಮ್ಮ ಸಂಗಾತಿಯ ಲೈಂಗಿಕ ಜೀವನದ ತೃಪ್ತಿಗೆ ಪೂರಕವಾಗಿಲ್ಲ ಎಂದೆನಿಸುತ್ತಿದ್ದರೆ ಆಗ ನೀವು ತಜ್ಞವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

ಸಾಮಾನ್ಯವಾಗಿ ಜನ ವಾರದಲ್ಲಿ ಎಷ್ಟು ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ?
ನನಗಿಂತಲೂ ಇತರರು ಹೆಚ್ಚಿನ ಪ್ರಮಾಣದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುತ್ತಾರೆ – ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ನೀವು ಇಂಥ ಆತಂಕಕ್ಕೆ ಒಳಗಾಗಬೇಕಿಲ್ಲ. ಅಮೆರಿಕದಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ, ಮದುವೆಯಾಗಿರುವ ದೀರ್ಘಕಾಲದ ದಂಪತಿ ವಾರಕ್ಕೆ ಒಂದು ಅಥವಾ ಎರಡು ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರಂತೆ. ಅದೂ ಕೂಡ, ಅನಾರೋಗ್ಯ, ಪ್ರವಾಸ, ಗರ್ಭಧಾರಣೆ, ಆರ್ಥಿಕ ಒತ್ತಡಗಳಂಥವು ಇಲ್ಲದಿದ್ದಾಗ. ನೂತನ ದಂಪತಿ ಹೆಚ್ಚು ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು ಸಹಜ. ಆದರೆ ಇದು ಕಾಲಕ್ರಮದಲ್ಲಿ ಕಡಿಮೆಯಾಗುತ್ತಹೋಗುತ್ತದೆ.

ಲೈಂಗಿಕ ಕ್ರಿಯೆಯಲ್ಲಿ ನನಗೆ ಆಸಕ್ತಿ ಕಡಿಮೆಯಾಗುತ್ತಿದೆ, ಏಕೆ?
ವಯಸ್ಸಾಗುತ್ತಹೋದಂತೆ ಸ್ತೀಯರಲ್ಲಿ ಕಾಮಾಸಕ್ತಿ ಕಡಿಮೆಯಾಗುವುದು ಸಹಜ. ಋತುಬಂಧದ ಸಮಯದಲ್ಲಿ ನಡೆಯುವು ಹಾರ್ಮೋನುಗಳ ವ್ಯತ್ಯಾಸವೂ ಇದಕ್ಕೆ ಪ್ರಮುಖ ಕಾರಣ. ಆದರೆ ಕಾಮಾಸಕ್ತಿ ಯಾವುದೇ ವಯಸ್ಸಿನಲ್ಲೂ ಕಡಿಮೆ ಆಗಬಹುದು. ಹಾರ್ಮೋನುಗಳಲ್ಲಿ ಏರುಪೇರು, ಮನೆ ಮತ್ತು ಕಚೇರಿಗಳಲ್ಲಿ ಒತ್ತಡ, ದೀರ್ಘಕಾಲ ಔಷಧಸೇವನೆ, ದೈಹಿಕ ದುರ್ಬಲತೆ ಮತ್ತು ನಿದ್ರಾಹೀನತೆಗಳು ಕಾಮಾಸಕ್ತಿಯನ್ನು ಕುಂಠಿತಗೊಳಿಸಬಹುದು.

ಔಷಧವೂ ಲೈಂಗಿಕಾಸಕ್ತಿಯನ್ನು ಕುಗ್ಗಿಸಬಹುದು!

ನಿಮಗೆ ಲೈಂಗಿಕತೆಯಲ್ಲಿ ಆಸಕ್ತಿ ಕಳೆದುಹೋಗುತ್ತಿದೆ ಎಂದೆನಿಸಿದರೆ ಮೊದಲು ನಿಮ್ಮ ದೈಹಿಕಾಂಶಗಳನ್ನು ಪರೀಕ್ಷಿಸಿಕೊಳ್ಳಿ. ಸಾಮಾನ್ಯ ಪರೀಕ್ಷೆಗಾಗಿ ವೈದ್ಯರನ್ನು ಸಂಪರ್ಕಿಸಿ. ಹಾರ್ಮೋನುಗಳಲ್ಲಿ ಏನಾದರೂ ವ್ಯತ್ಯಾಸಗಳು ಆಗಿವೆ ಎಂಬುದನ್ನು ಪತ್ತೆ ಮಾಡಿಸಿಕೊಳ್ಳಿ. ನೀವು ಈಗ ತೆಗೆದುಕೊಳ್ಳುತ್ತಿರುವ ಔಷಧಗಳ ಅಡ್ಡಪರಿಣಾಮದಿಂದ ಲೈಂಗಿಕಾಸಕ್ತಿ ಕುಗ್ಗಿತ್ತಿದೆಯೇ ಎಂಬುದನ್ನೂ ಪರೀಕ್ಷಿಸಿಕೊಳ್ಳಿ. ಸರಿಯಾದ ನಿದ್ರೆ ಒದಗುತ್ತಿದೆಯೆ ಎನ್ನುವುದನ್ನೂ ಗಮನಿಸಿ. ಆರೋಗ್ಯಪೂರ್ಣ ಆಹಾರಸೇವನೆ, ನಿಯಮಿತ ವ್ಯಾಯಾಮಗಳ ಕಡೆಗೆ ಗಮನವನ್ನು ನೀಡಿ.

Comments are closed.

Social Media Auto Publish Powered By : XYZScripts.com