WATCH : ಚೀನೀ ಸೈನಿಕರಿಗೆ ನಮಸ್ತೆ ಎನ್ನುವುದನ್ನು ಹೇಳಿಕೊಟ್ಟ ರಕ್ಷಣಾ ಸಚಿವೆ

ದೆಹಲಿ : ಸಿಕ್ಕಿಂನ ಭಾರತ -ಚೀನಾ ಗಡಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ ನೀಡಿದ್ದು, ಈ ವೇಳೆ ಚೀನೀ ಸೈನಿಕರಿಗೆ ನಮಸ್ತೆ ಎಂದು ಹೇಳಲು ಕಲಿಸಿದ್ದಾರೆ. ಈ ಕುರಿತು ವಿಡಿಯೊವೊಂದು ವೈರಲ್‌ ಆಗುತ್ತಿದ್ದು ವಿಡಿಯೊದಲ್ಲಿ ನಿರ್ಮಲಾ ಸೀತಾರಾಮನ್‌ ಚೀನೀ ಸೈನ್ಯದ ಅಧಿಕಾರಿಯ ಜೊತೆ ಸಂವಾದ ನಡೆಸುತ್ತಿರುವುದು ದಾಖಲಾಗಿದೆ. ಚೀನೀ ಅಧಿಕಾರಿ ತನ್ನ ಸೈನಿಕರಿಗೆ ನಿರ್ಮಲಾ ಸೀತಾರಾಮನ್‌ ಅವರ ಪರಿಚಯ ಮಾಡಿಕೊಟ್ಟಿದ್ದಾರೆ. ಈ ವೇಳೆ ನಿರ್ಮಲಾ ಚೀನೀ ಅಧಿಕಾರಿಗಳಿಗೆ ಎರಡೂ ಕೈ ಜೋಡಿಸಿ ನಮಸ್ತೆ ಎಂದಿದ್ದಾರೆ. ಜೊತೆಗೆ ನಮಸ್ತೆ ಎಂದರೇನು ಗೊತ್ತಿದೆಯೇ ಎಂದು ಕೇಳಿದ್ದು, ಬಳಿಕ ಅದರ ಅರ್ಥ ತಿಳಿಸಿಕೊಟ್ಟಿದ್ದಾರೆ.

ಬಳಿಕ ನಿಮ್ಮ ಚೀನೀ ಭಾಷೆಯಲ್ಲಿ ನಮಸ್ತೆ ಎನ್ನುವುದಕ್ಕೆ ಏನೆನ್ನುತ್ತಾರೆ ಎಂದು ಕಲಿಸುವಂತೆ ಕೇಳಿದ್ದು,  ಅಧಿಕಾರಿ ನಿ ಹೋ ಎಂದು ಸಚಿವರಿಗೆ ಕಲಿಸಿಕೊಟ್ಟಿದ್ದಾರೆ.

 

Social Media Auto Publish Powered By : XYZScripts.com