ನೂತನ ಕರಡು ನೀತಿ : 2018ರಿಂದ ಹಜ್‌ಗೆ ನೀಡುತ್ತಿದ್ದ ಸಬ್ಸೀಡಿ ಬಂದ್‌ !

ಮುಂಬೈ : ವಾರ್ಷಿಕ ಹಜ್‌ ಯಾತ್ರೆಗೆ ತೆರಳುವ ಮುಸ್ಲೀಮರಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಸಬ್ಸೀಡಿ ರದ್ದಾಗಲಿದೆ. ಹಜ್‌ ಯಾತ್ರೆಗೆ ಸಂಬಂಧಿಸಿದಂತೆ ಕರಡು ನೀತಿ ಸಿದ್ಧಪಡಿಸಲಾಗಿದ್ದು, ಯಾತ್ರಿಕರಿಗೆ ನೀಡು ಸಬ್ಸೀಡಿ ಧನವನ್ನು ನಿಲ್ಲಿಸುವ ಕುರಿತೂ ಕರಡು ಸಮಿತಿಯಲ್ಲಿ ಉಲ್ಲೇಖವಿದೆ.

ಕೇಂದ್ರದ ಮಾಜಿ ಕಾರ್ಯದರ್ಶಿ ಅಫ್ಜಲ್‌ ಅಮಾನುಲ್ಲಾ  ನೇತೃತ್ವದ ಸಮಿತಿ ಈ ಕುರಿತು ಶಿಫಾರಸ್ಸು ಮಾಡಿದ್ದು, ಕೇಂದ್ರ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಅವರಿಗೆ ಕರಡು ನೀತಿ 2018ನ್ನು ಸಲ್ಲಿಸಲಾಗಿದೆ. ಹಜ್‌ ಸಬ್ಸೀಡಿ ರದ್ದು, 45 ವರ್ಷ ಮೇಲ್ಪಟ್ಟ ಮಹಿಳೆಯರು ಕನಿಷ್ಠ 4 ಮಂದಿಯ ತಂಡದೊಂದಿಗೆ ಯಾತ್ರೆಗೆ ಹೋಗಬಹುದಾಗಿದೆ. ಮುಂದಿನ ವರ್ಷದ ಹಜ್‌ ಯಾತ್ರೆಗೆ ಈ ಹೊಸ ಕರಡು ನೀತಿ ಅನ್ವಯವಾಗಲಿದೆ.
ಇದೊಂದು ಪಾರದರ್ಶಕ , ಜನಸ್ನೇಹಿ ನೀತಿಯಾಗಿದ್ದು, ಯಾತ್ರಿಕರ ಸುರಕ್ಷತೆ ಮತ್ತು ಭದ್ರತೆಯ ದೃಷ್ಠಿಯಿಂದ ಈ ನೀತಿಯನ್ನು ರೂಪಿಸಲಾಗಿದೆ ಎಂದು ಮುಕ್ತಾರ್ ಅಬ್ಬಾಸ್‌ನಖ್ವಿ ಹೇಳಿದ್ದಾರೆ. ಹಂತ ಹಂತವಾಗಿ ಹಜ್‌ ಸಬ್ಸೀಡಿಯನ್ನು ಕಡಿಮೆ ಮಾಡುತ್ತಾ, 2022ರೊಳಗೆ ಸಬ್ಸೀಡಿಯನ್ನು ಸಂಪೂರ್ಣವಾಗಿ ರದ್ದು ಮಾಡುವಂತೆ 2012ರಲ್ಲೇ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಸಮಿತಿ ರಚಿಸಿದ್ದು ಕೆಲ ಕರಡು ನೀತಿಗಳನ್ನು ರೂಪಿಸಿದೆ.
ಹಜ್‌ ಸಬ್ಸೀಡಿ ರದ್ದು, 45 ವರ್ಷ ಮೇಲ್ಪಟ್ಟ ಮಹಿಳೆಯರು ಕನಿಷ್ಠ ನಾಲ್ಕು ಮಂದಿ ಇರುವ ತಂಡದ ಜೊತೆ ಪ್ರಯಾಣ ಮಾಡಬಹುದು. 45ಕ್ಕಿಂತ ಕಡಿಮೆ ವಯಸ್ಸಿನ ವರು ತಂದೆ ಅಥವಾ ಸಹೋದರರ ಜೊತೆ ಪ್ರಯಾಣ ಮಾಡಬಹುದು. ವಿಮಾನ ಹ್ತುವ ಸ್ಥಳಗಳ ಇಳಿಕೆ, ಸಬ್ಸೀಡಿ ರದ್ದಾದ ಬಳಿಕ ಉಳಿದ ಹಣವನ್ನು ಮುಸ್ಲೀಮರ ಶೈಕ್ಷಣಿಕ ಸಬಲೀಕರಣಕ್ಕೆ ಬಳಸಿಕೊಳ್ಳುವುದು, ಖರ್ಚನ್ನು ತಗ್ಗಿಸುವ ಸಲುವಾಗಿ ಯಾತ್ರಿಕರನ್ನು ಹಡಗುಗಳ ಮೂಲಕ ಕಳುಹಿಸಲು ಸೌದಿಯೊಂದಿಗೆ ಮಾತುಕತೆ  ಸೇರಿದಂತೆ ಅನೇಕ ನೀತಿಗಳನ್ನು ಜಾರಿಗೊಳಿಸಿದೆ.