ಮೋದಿಗೆ ಫಿದಾ ಆದ ಹಚ್ಚೆ ಮಹಾರಾಜ : ಮೈತುಂಬ ಬಿಜೆಪಿಗರ ಟ್ಯಾಟೂ ಹಾಕಿಸಿಕೊಂಡ ಬಿಜೆಪಿ ಅಭಿಮಾನಿ

ಗದಗ : ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಆಡಳಿತ ವೈಖರಿಯನ್ನು ನೋಡಿ ತಲೆಬಾಗಿರುವ ಬಿಜೆಪಿ ಅಭಿಮಾನಿಯೊಬ್ಬ ತನ್ನ ಮೈ ಮೇಲೆ ಅವರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾನೆ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕದಾಂನಪುರ ಗ್ರಾಮದ 23 ವರ್ಷದ ಯುವಕ ಆನಂದ ಹೊಸಮನಿ, ಮೋದಿ ದೇಶದಲ್ಲಿ ಮಾಡಿದ ನೋಟ್‌ ಬ್ಯಾನ್, GST, ಸ್ವಚ್ ಭಾರತ ಸೇರಿದಂತೆ ಅವರ ಅನೇಕ ಯೋಜನೆಗಳು ಈತನಿಗೆ ಇಷ್ಟ ಆಗಿದ್ದು, ಮುಂದಿನ ದಿನಮಾನಗಳಲ್ಲಿ ಈ ಯೋಜನೆಗಳು ಎಲ್ಲರಿಗೂ ವರದಾನ ಆಗಲಿವೆ. ಆದ್ದರಿಂದ ಮೋದಿ ಸೇರಿದಂತೆ  ಬಿಜೆಪಿ ನಾಯಕರಾದ ಶ್ರೀರಾಮುಲು, ಅವರ ಕ್ಷೇತ್ರದ ಮಾಜಿ ಎಂ ಎಲ್ ಎ ಕಳಕಪ್ಪ ಬಂಡಿ ಹೆಸರನ್ನೂ ಹಚ್ಚೆ ಹಾಕಿಸಿಕೊಂಡಿದ್ದಾನೆ. ಇದಲ್ಲದೆ ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೈ ಮೇಲೆ ಪೂರ್ತಿ ಬಿಜೆಪಿ ನಾಯಕರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಳ್ಳೊದಾಗಿ ಹೇಳಿದ್ದಾನೆ.