ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಎಚ್.ಜಿ ರಮೇಶ್‌ ನೇಮಕ

ಬೆಂಗಳೂರು : ಕರ್ನಾಟಕದ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಎಚ್‌.ಜಿ ರಮೇಶ್‌ ನೇಮಕಗೊಂಡಿದ್ದಾರೆ. ಈ ಹಿಂದೆ ನ್ಯಾ. ರಮೇಶ್‌ ಕರ್ನಾಟಕ ಹೈಕೋರ್ಟ್‌ನಲ್ಲಿ ಹಿರಿಯ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದರು. ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಸುಬ್ರೋ ಕಮಲ್‌ ಮುಖರ್ಜಿ ಅಕ್ಟೋಬರ್‌ 9ರಂದು ನಿವೃತ್ತಿ ಹೊಂದಲಿದ್ದು, ಅವರ ಸ್ಥಾನವನ್ನು ರಮೇಶ್‌ ತುಂಬಲಿದ್ದಾರೆ.

ನ್ಯಾ. ರಮೇಶ್‌ ಕರ್ನಾಟಕ ಹೈಕೋರ್ಟ್‌ನಲ್ಲಿ 1982ರಿಂದ 2003ರವರೆಗೆ ಕೆಲಸ ಮಾಡಿದ್ದು, 2003ರ ಮೇ 12ರಂದು ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಬಳಿಕ 2004ರಲ್ಲಿ ಶಾಶ್ವತ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

Comments are closed.

Social Media Auto Publish Powered By : XYZScripts.com