ಹೈಕಮಾಂಡ್‌ಗೆ ಕಪ್ಪ ನೀಡಿದ ಆರೋಪ : ಬಿಎಸ್‌ವೈ, ಅನಂತ್‌ ಕುಮಾರ್‌ ವಿರುದ್ದ ಎಸಿಬಿಯಲ್ಲಿ ದೂರು

ಬೆಂಗಳೂರು : ಮಾಜಿ ಸಿಎಂ ಬಿಎಸ್‌.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್‌ ಕುಮಾರ್‌ ವಿರುದ್ದ ಭ್ರಷ್ಟಾಚಾರ ನಿಗ್ರಹ ದಲ (ಎಸಿಬಿ) ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಬಿಜೆಪಿ ಹೈಕಮಾಂಡ್‌ಗೆ ಕಪ್ಪ ನೀಡಿದ್ದಾರೆ ಎಂಬ ವಿಚಾರ ಸಂಬಂಧ ಬಿಜೆಪಿ ಕಾರ್ಯಕಾರಿಣಿಯಲ್ಲಿ ಬಿಎಸ್‌ವೈ ಹಾಗೂ ಅನಂತ್‌ ಕುಮಾರ್ ನಡುವಿನ ಸಂಭಾಷಣೆಯ ವಿಡಿಯೊ ಸಹಿತ ಬಹಿರಂಗವಾಗಿತ್ತು.

ಹೈಕಮಾಂಡ್‌ಗೆ ಸ್ಥಳೀಯ ಪಕ್ಷದ ನಾಯಕರು ಹಣ ವರ್ಗಾವಣೆ ಮಾಡಿರುವ ಬಗ್ಗೆ ಇಬ್ಬರು ನಾಯಕರು ಮಾತನಾಡಿದ್ದ ಧ್ವನಿ ಮುದ್ರಣಗೊಂಡಿತ್ತು. ಈ ಆಡಿಯೋ ಕ್ಲಿಪ್ಪನ್ನು ವಿದಿ ವಿಧಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಇದರಲ್ಲಿರುವ ಧ್ವನಿ ಯಡಿಯೂರಪ್ಪ ಹಾಗೂ ಅನಂತ್‌ ಕುಮಾರ್‌ ಅವರದ್ದು ಎಂದು ಖಚಿತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಬಿಎಸ್‌ವೈ ಪ್ರತಿಕ್ರಿಯೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ತಮಗೆ ಬೇಕಾದಂತೆ ಎಸಿಬಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಅದಕ್ಕೆ ನಮ್ಮ ಮೇಲೆ ಪ್ರಕರಣ ದಾಖಲಿಸಲಾಗಿದೆ. ನನ್ನನ್ನು ಹಾಗೂ ಅನಂತ್‌ ಕುಮಾರ್‌ ಅವರನ್ನು ಎದುರಿಸಲು ವಿಫಲವಾದ ಕಾರಣ ಎಸಿಬಿಯನ್ನು ಛೂ ಬಿಟ್ಟಿರುವುದಾಗಿ ಆರೋಪಿಸಿದ್ದಾರೆ.

Comments are closed.

Social Media Auto Publish Powered By : XYZScripts.com