ಭಾರತ ವಿಶ್ವ ಶಕ್ತಿಯಾಗಿ ಬೆಳೆದಿದೆ, ಅದಕ್ಕೇ ಡೋಕ್ಲಾಂ ಸಮಸ್ಯೆ ಬಗೆಹರಿದಿದೆ : ರಾಜನಾಥ್‌ ಸಿಂಗ್‌

ದೆಹಲಿ : ಭಾರತ ಹಾಗೂ ಚೀನಾ ಮಧ್ಯದ ಡೋಕ್ಲಾಂ ಸಮಸ್ಯೆ ಪರಿಹಾರಗೊಂಡಿದೆ ಅದಕ್ಕೆ ಭಾರತ ವಿಶ್ವದ ಶಕ್ತಿಶಾಲಿ ರಾಷ್ಟ್ರವಾಗಿರುವುದು ಎಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೆಲ ವರ್ಷಗಳಿಂದ ವಿಶ್ವದ ರಾಷ್ಟ್ರದ ಎದುರು ಭಾರತದ ಘನತೆ ಹಾಗೂ ಚಿತ್ರಣ ಸಂಪೂರ್ಣ ಬದಲಾಗಿದೆ. ಭಾರತ ಹಾಗೂ ಚೀನಾ, ಡೋಕ್ಲಾಂ ವಿಚಾರದಲ್ಲಿ 71 ದಿನಗಳ ಕಾಲ ಮುಖಾಮುಖಿಯಾಗಿದ್ದವು. ಚೀನಾ ಗಡಿಯಲ್ಲಿ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದಾಗ ಭಾರತಕ್ಕೆ ಆತಂಕ ಎದುರಾಗಿತ್ತು. ಚೀನಾ ಕಾನೂನು ಬಾಹಿರವಾಗಿ ರಸ್ತೆ ನಿರ್ಮಿಸುತ್ತಿರುವುದಕ್ಕೆ ಭಾರತ ಹಾಗೂ ಭೂತಾನ್‌ ಆಕ್ಷೇಪಿಸಿದ್ದವು. ಆದರೆ ಭಾರತದ ನಡೆಯಿಂದಾಗಿ ಡೋಕ್ಲಾಂ ವಿಷಯ ಶಾಂತವಾಗಿದೆ ಎಂದಿದ್ದಾರೆ.

ಅಲ್ಲದೆ ಈ ವಿಚಾರದಲ್ಲಿ ಭಾರತ ಪ್ರಬುದ್ದತೆಯನ್ನು ಮೆರೆದಿದೆ. ಭಾರತ ಪ್ರಪಂಚದ ಶಕ್ತಿಶಾಲಿ ರಾಷ್ಟ್ರವಾಗಿದೆ. ಇಲ್ಲದಿದ್ದರೆ ಡೋಕ್ಲಾಂ ಸಮಸ್ಯೆ ಬಗೆಹರಿಯುತ್ತಿರಲಿಲ್ಲ ಎಂದಿದ್ದಾರೆ.

 

Comments are closed.

Social Media Auto Publish Powered By : XYZScripts.com