ಇನ್ನೂ ಖಿನ್ನತೆಯಿಂದ ಸಂಪೂರ್ಣವಾಗಿ ಹೊರಬಂದಿಲ್ಲವಂತೆ ದೀಪಿಕಾ….ಯಾಕೆ ?

ನಟ ನಟಿರು ಸಖತ್‌ ಆರಾಮಾಗಿರುತ್ತಾರೆ. ಅವರ ಬಳಿ ಎಲ್ಲ ಇರುತ್ತದೆ. ಅವರಿಗೇನು ಕಡಿಮೆ ಎಂದು ಅದೆಷ್ಟೋ ಜನ ಗುನುಗುನಿಸುವುದನ್ನು ಕೇಳಿಯೇ ಇರುತ್ತೇವೆ. ಆದರೆ ಮೊದಲ ಬಾರಿಗೆ ತಾವು ಖಿನ್ನತೆಗೊಳಗಾದ ಬಗ್ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೇಳಿಕೊಂಡಿದ್ದರು. ಜೊತೆಗೆ ಅದರಿಂದ ಹೊರಬರಲು ತಾವು ಪೋಷಕರ ಸಹಾಯ ಪಡೆದಿದ್ದಾಗಿಯೂ ಹೇಳಿದ್ದರು.

ಆದರೆ ಈ ಬಾರಿಯೂ ತಮಗಿದ್ದ ಖಿನ್ನತೆ ಬಗ್ಗೆ ದೀಪಿಕಾ ಮಾತನಾಡಿದ್ದು,  ನಾನು ಖಿನ್ನತೆಯಲ್ಲಿಲ್ಲ, ನಾನು ಆರಾಮಾಗಿದ್ದೇನೆ ಎಂದೆಲ್ಲ ನಾನು ಹೇಳಬಹುದು. ಆದರೆ ನಾನಿನ್ನೂ ಖಿನ್ನತೆಯಿಂದ ಸಂಪೂರ್ಣ ಹೊರಬಂದಿಲ್ಲ . ಆ ಬಗ್ಗೆ ನನಗೆ ಈಗಲೂ ಭಯವಿದೆ ಎಂದಿದ್ದಾರೆ.

ನಾನು ಮತ್ತೆ ಸಂಪೂರ್ಣ ಖಿನ್ನತೆಗೆ ಒಳಗಾಗಿಬಿಡುತ್ತೇನೋ ಎಂಬ ಬಗ್ಗೆ ನನಗೆ ಆಗಾಗ ಯೋಚನೆ ಬರುತ್ತಿರುತ್ತದೆ. ಇದು ನನ್ನ ಸಿನಿಮಾ ಜೀವನಕ್ಕೆ ಸಾಕಷ್ಟು ಹಾನಿ ಮಾಡುತ್ತದೆ. ಅನೇಕರು ನಾನು ಖಿನ್ನತೆಗೆ ಒಳಗಾಗಿದ್ದೇನೆ. ನನ್ನಿಂದ ನಟನೆ ಮಾಡಲು ಸಾಧ್ಯವಿಲ್ಲ ಎಂದು ಕೊಳ್ಳುವುದಾಗಿ ಹೇಳಿದ್ದಾರೆ.

ಸಾಮಾನ್ಯವಾಗಿ ಶಾಲೆಗಳಲ್ಲಿ ದೈಹಿಕ ಆರೋಗ್ಯದ ಬಗ್ಗೆ ಮಾತ್ರ ಹೇಳಿಕೊಡುತ್ತಾರೆ. ಆದರೆ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯವಾಗುತ್ತದೆ. ಆದರೆ ಯಾರೊಬ್ಬರೂ ಅದರ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಪಠ್ಯಗಳಲ್ಲಿ ಅರದ ಬಗ್ಗೆ ಇರುವುದಿಲ್ಲ ಎಂದಿದ್ದಾರೆ.

 

 

 

 

 

 

Comments are closed.