30ರ ವಯಸ್ಸಿನಲ್ಲೂ 20ರಂತೆ ಕಾಣಲು ಇಲ್ಲಿದೆ ಆಯುರ್ವೇದದ ಸಪ್ತಸೂತ್ರ

ಸಾಮಾನ್ಯವಾಗಿ ಹುಡುಗಿಯರು ವಯಸ್ಸಾಗುತ್ತಿದ್ದಂತೆ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಇನ್ನು 30 ವಯಸ್ಸು ಹತ್ತಿರಾಗುತ್ತಿದೆ ಎಂದರೆ ಸಾಕು ಯಾವ್ಯಾವುದೋ ಕ್ರೀಮ್‌ಗಳ ಮೊರೆ ಹೋಗಿ ತ್ವಚೆಯನ್ನು ಮತ್ತಷ್ಟು ಕಳೆಗುಂದುವಂತೆ ಮಾಡಿಕೊಳ್ಳುತ್ತಾರೆ. ನೀವು 30 ರ ವಯಸ್ಸಿನಲ್ಲೂ 20ರಂತೆ ಕಾಣಲು  ಆಯುರ್ವೇದ ಸಹಾಯ ಮಾಡುತ್ತದೆ. ಮೊದಲೆಲ್ಲ ಕಾಯಿಲೆಗಳನ್ನು ಗುಣಪಡಿಸಲು ಬಳಕೆಯಾಗುತ್ತಿದ್ದ ಆಯುರ್ವೇದ ಸೌಂದರ್ಯ ವೃದ್ಧಿಗೂ ಬಳಕೆಯಾಗುತ್ತಿದೆ.

ಎಲ್ಲಾ ರೀತಿಯ ಚರ್ಮದ ಸಮಸ್ಯೆಗಳಿಗೆ ಅಥವಾ ಸೌಂದರ್ಯ ವೃದ್ಧಿಗೆ ಆಯುರ್ವೇದ ಜೌಷಧಿಗಳು, ಕ್ರೀಂಗಳನ್ನು ಬಳಕೆ ಮಾಡುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ತ್ವಚೆ ರಕ್ಷಣೆಗೆ ಆಯುರ್ವೇದದಲ್ಲಿ ಸಾಕಷ್ಟು ಪರಿಹಾರಗಳಿಗೆ, ಅವುಗಳ ಬಗ್ಗೆ ಈಗ ತಿಳಿದುಕೊಳ್ಳೋಣ..

ಅಕಾಲಿಕ ನೆರಿಗೆ ತಪ್ಪಿಸಲು

ಪ್ರತಿನಿತ್ಯ ಹರಳೆಣ್ಣೆಯನ್ನು ಹಚ್ಚಿ ಅರ್ಧಗಂಟೆ ಬಿಟ್ಟು ಮುಖ ತೊಳೆದರೆ ಮುಖದಲ್ಲಿ ನೆರಿಗೆಗಳು ಕಾಣಿಸುವುದಿಲ್ಲ. ಅಲ್ಲದೆ ದೀರ್ಘಕಾಲದವರೆಗೆ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.

ಕಲೆ ರಹಿತ ತ್ವಚೆಗೆ

ಪ್ರತಿನಿತ್ಯ ಹತ್ತಿಯನ್ನು ಹಾಲಿನಲ್ಲಿ ಅದ್ದಿ ಮುಖಕ್ಕೆ ಕ್ಲೆನ್ಸ್‌ ಮಾಡಿಕೊಳ್ಳುತ್ತಿರಬೇಕು. ಹೀಗೆ ಮಾಡುತ್ತಿದ್ದರೆ ಕಲೆ ರಹಿತ ತ್ವಚೆ ನಿಮ್ಮದಾಗುತ್ತದೆ.

ಮಾಯ್ಚಿರೈಸರ್‌

ಮೊಟ್ಟೆಯ ಬಿಳಿ, ಕಿತ್ತಳೆ ರಸ, ನಿಂಬೆ ರಸವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.

ಸ್ಕಿನ್‌ ಕಂಡೀಷನರ್

2 ಚಮಚ ಹಾಲಿನ ಕೆನೆಗೆ ಅರ್ಧ ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಬೇಕು. ಬಳಿಕ ನೆನೆಸಿದ ಬಟ್ಟೆಯಿಂದ ಮುಖವನ್ನು ಉಜ್ಜಬೇಕು.

ಕಪ್ಪು ಚುಕ್ಕೆಗಳು

ಪ್ರತಿನಿತ್ಯ ಆಲೂಗೆಡ್ಡೆಯನ್ನು ಮುಖಕ್ಕೆ 10 ನಿಮಿಷ ಉಜ್ಜಿದರೆ ಕಪ್ಪು ಚುಕ್ಕಗೆಳು ಮಾಯವಾಗುತ್ತವೆ.

ಮೃದು ತ್ವಚೆ 

ಕಿತ್ತಳೆ ರಸವನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚುತ್ತಿದ್ದರೆ ತ್ವಚೆ ಮೃದುವಾಗುತ್ತದೆ.

ಮುಖದಲ್ಲಿರುವ ಬೇಡವಾದ ಕೂದಲನ್ನು ಹೋಗಲಾಡಿಸಲು

ಸಾಸಿವೆ ಎಣ್ಣೆ, ಗೋಧಿಹಿಟ್ಟು, ಅರಿಶಿಣದ ಮಿಶ್ರಣವನ್ನು ಮುಖಕ್ಕೆ ಹಚ್ಚುತ್ತಿದ್ದರೆ ಮುಖದ ಮೇಲಿರುವ ಬೇಡವಾದ ಕೂದಲು ತೊಲಗುತ್ತದೆ.

One thought on “30ರ ವಯಸ್ಸಿನಲ್ಲೂ 20ರಂತೆ ಕಾಣಲು ಇಲ್ಲಿದೆ ಆಯುರ್ವೇದದ ಸಪ್ತಸೂತ್ರ

  • October 20, 2017 at 9:49 PM
    Permalink

    This website is usually a walk-through you discover the details it suited you about this and didn’t know who need to. Glimpse here, and you’ll undoubtedly discover it.

Comments are closed.