ಬನ್ನೇರುಘಟ್ಟ : ಹುಲಿಗೆ ಆಹಾರ ಹಾಕಲು ಹೋಗಿ ತಾನೇ ಆಹಾರವಾದ ಆಂಜನೇಯ..

ಬನ್ನೇರುಘಟ್ಟ : ಆನೇಕಲ್‌ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳಿಗೆ ಆಹಾರ ನೀಡಲು ತೆರಳಿದ್ದ ವ್ಯಕ್ತಿಯೇ ಹುಲಿಗೆ ಆಹಾರವಾಗಿರುವ ಘಟನೆ ನಡೆದಿದೆ. ಉದ್ಯಾನವನದ ಗೇಟ್‌ ಕೀಪರ್‌ ಆಗಿದ್ದ ಆಂಜನೇಯ (35) ನಿನ್ನೆ ಸಂಜೆ ಹುಲಿಗಳಿಗೆ ಆಹಾರ ನೀಡಿಲು ತೆರಳಿದ್ದರು.

ಈ ವೇಳೆ 1 ವರ್ಷದ ವಯಸ್ಸಿನ ಎರಡು ಹುಲಿ ಮರಿಗಳು ಆಂಜನೇಯ ಅವರ ಮೈಮೇಲೆ ಎಗರಿದ್ದು, ಈ ವೇಳೆ ಬಂದ ದೊಡ್ಡ ಹುಲಿಗಳು ಆಂಜನೇಯ ಅವರನ್ನು ದಾಳಿ ಮಾಡಿವೆ. ತೀವ್ರ ರಕ್ತಸ್ರಾವದಿಂದ ಆಂಜನೇಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ಆಂಜನೇಯ ಅವರಿಗೆ ಹುಲಿಗಳ ಬಗ್ಗೆ ಹೆಚ್ಚಿನ ಅರಿವಿರಲಿಲ್ಲ. ಸಾಮಾನ್ಯವಾಗಿ ಹುಲಿಗಳನ್ನು ನೋಡಿಕೊಳ್ಳಲು ನುರಿತ ಸಿಬ್ಬಂದಿಯನ್ನು ನಿಯೋಜಿಸುತ್ತಾರೆ. ಆದರೆ ಆಂಜನೇಯ ಅವರಿಗೆ ಸರಿಯಾದ ತರಬೇತಿ ಇರದ ಕಾರಣ ಹುಲಿಗೆ ಆಹಾರವಾಗಿದ್ದಾರೆ.

ಬನ್ನೇರುಘಟ್ಟ ಠಾಮೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.