ಅಹಿಂದ ವರ್ಗಕ್ಕೆ ಸಂಸ್ಕೃತ ಪಾಠ : ಮುಜರಾಯಿ ಇಲಾಖೆಗಳಿಗೆ ದಲಿತ ಅರ್ಚಕರ ನೇಮಕಕ್ಕೆ ನಿರ್ಧಾರ

ಬೆಂಗಳೂರು : ಅಧಿಕಾರಕ್ಕೆ ಬಂದಾಗಿನಿಂದಲೂ ಅಹಿಂದ ಜಪ ಮಾಡುತ್ತಿದ್ದ ಸರ್ಕಾರ ಈಗ ದಲಿತ ಅರ್ಚಕರ ನೇಮಕಕ್ಕೆ ನಿರ್ಧರಿಸಿದೆ. ಈ ಸಂಬಂಧ ಅಹಿಂದ ವರ್ಗಕ್ಕೆ ಸರ್ಕಾರ ವೇದ ಸಂಸ್ಕೃತ ಪಾಠ ಮಾಡಲು ಚಿಂತಿಸಿದೆ.

ಶನಿವಾರ ಮುಜರಾಯಿ ಇಲಾಖೆ ಮುಖ್ಯಸ್ಥ ರುದ್ರಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಸರ್ಕಾರದಿಂದಲೇ ಐದು ವೇದ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಮುಜರಾಯಿ ಇಲಾಖೆಯ ಅಡಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ತರುತ್ತಿರುವ ಕೊಲ್ಲೂರು ಮೂಕಾಂಬಿಕೆ, ಕುಕ್ಕೆ ಸುಬ್ರಮಣ್ಯ, ಸವದತ್ತಿ ಯಲ್ಲಮ್ಮ, ದೇವರಾಯನ ದುರ್ಗ ಹಾಗೂ ಕಟೀಲು ದುರ್ಗಾಪರಮೇಶ್ವರಿ ದೇವಾಲಯಗಳಲ್ಲಿ ಸಂಸ್ಕೃತ ವೇದಾಧ್ಯಯನ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಈ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದ್ದು, ಹಿಂದುಳಿದ ವರ್ಗದವರಿಗೆ ವೇದ ಪಾಟ ಕಲಿಸುವುದರ ಮೂಲಕ ಮುಜರಾಯಿ ದೇವಾಲಯಗಳಿಗೆ ಅರ್ಚಕರಾಗಿ ನೇಮಕ ಮಾಡಲಾಗುವುದು. ಪ್ರತೀ ಶಾಲೆಗೂ 25ರಿಂದ 30 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ.

 

 

 

 

Comments are closed.

Social Media Auto Publish Powered By : XYZScripts.com