ಜಮೀರ್ ಮುಸ್ಲಿಂ ಮಾಸ್‌ ಲೀಡರ್, ಸಿಎಂ ಆದರೂ ಆಗಬಹುದು : ಎಚ್‌ಡಿಡಿ ವ್ಯಂಗ್ಯ

ಹಾಸನ : ಜಮೀರ್ ಅಹಮದ್‌ ಒಬ್ಬ ಮುಸ್ಲಿಂ ಮಾಸ್‌ ಲೀಡರ್‌, ಪಾಪ ಕುಮಾರಸ್ವಾಮಿ, ಜಮೀರ್‌ನನ್ನು ಮಂತ್ರಿ ಮಾಡಿದ್ದ. ಜಮೀರ್ ಕಾಂಗ್ರೆಸ್‌ನ ದೊಡ್ಡ ಲೀಡರ್‌ ಅಲ್ಲಿ ಆತ ಸಿಎಂ ಆಗಬಹುದೇನೋ ಎಂದು ಮಾಜಿ ಪ್ರಧಾನಿ ದೇವೇಗೌಡ ವ್ಯಂಗ್ಯವಾಡಿದ್ದಾರೆ.

ನೈಸ್‌ ರಸ್ತೆ ವಿಚಾರದಲ್ಲಿ ಜಗದೀಶ್ ಶೆಟ್ಟರ್‌ ಹಾಗೂ ಸಿಎಂ ರೋಷದಲ್ಲಿ ಮಾತನಾಡಿದರು. ಆದರೂ ನೈಸ್‌ ವರದಿ ಸದನ ಸಮಿತಿಯಲ್ಲಿ ಜಾರಿಯಾಗಿಲ್ಲ. ನೈಸ್‌ ಎಂಬುದು ಬೇನಾಮಿ ಕಂಪನಿ. ರಸ್ತೆ ಮುಗಿದ ಬಳಿಕ ಟೋಲ್‌ ಸಂಗ್ರಹಿಸಬೇಕು. ಆದರೆ ಇವರು ಎಲ್ಲೆಡೆ ಟೋಲ್ ಸಂಗ್ರಹಿಸುತ್ತಿರುವುದಾಗಿ ಹೇಳಿದ್ದಾರೆ.

ದಿನಕ್ಕೆ ಒಂದುವರೆ ಕೋಟಿ ಟೋಲ್‌ ಟ್ಯಾಕ್ಸ್ ಬರುತ್ತಿದೆ. ಆದರೆ ಇದುವರೆಗೂ ಯಾವುದೇ ಅಭಿವೃದ್ದಿಯಾಗಿಲ್ಲ. ನಾನು ಈ ಬಗ್ಗೆ ರಸ್ತೆಗಿಳಿದು ಹೋರಾಟ ಮಾಡಿದ್ದೇನೆ. ಈ ಬಗ್ಗೆ ಸಿಎಂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೀನಿ ಎನ್ನುತ್ತಾರೆ. ಆದರೆ ಏನು ಮಾಡುತ್ತಾರೋ ಗೊತ್ತಿಲ್ಲ ಎಂದಿದ್ದಾರೆ.