ಕಾರಿನಲ್ಲೇ ಬಟ್ಟೆ ಬದಲಿಸಿದ ಹೀರೋ..ವೀಡಿಯೋ ಮಾಡಿದ ಹೀರೋಯಿನ್

ವರುಣ್ ಧವನ್, ಜಾಕ್ವೆಲಿನ್ ಫರ್ನಾಂಡಿಸ್, ತಾಪ್ಸಿ ಪನ್ನು ಅಭಿನಯದ ಜುದ್ವಾ-2 ಸಿನಿಮಾ ಇದೇ ವಾರ ವಿಶ್ವದೆಲ್ಲೆಡೆ ಬಿಡುಗಡೆಯಾಗ್ತಿದೆ. ವರುಣ್, ಜಾಕ್ವೆಲಿನ್ ಜುದ್ವಾ-2 ಚಿತ್ರದ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅದು ಎಷ್ಟರಮಟ್ಟಿಗೆ ಅಂದ್ರೆ, ಬಟ್ಟೆ ಬದಲಿಸಲು ಪುರುಸತ್ತು ಇಲ್ಲದಷ್ಟು. ಇವರಿಬ್ರು ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಚಿತ್ರದ ಪ್ರಮೋಷನ್ ಮಾಡ್ತಿದ್ದಾರೆ. ಅದು ಯಾವ ಮಟ್ಟಿಗೆ ಅಂದ್ರೆ, ಇತ್ತೀಚೆಗೆ ಒಂದು ಕಾರ್ಯಕ್ರಮದಿಂದ ಮತ್ತೊಂದು ಕಾರ್ಯಕ್ರಮಕ್ಕೆ ಹೋಗೋ ದಾರಿಯಲ್ಲಿ ಚಲಿಸೋ ಕಾರಿನಲ್ಲಿ ವರುಣ್, ಬಟ್ಟೆ ಬದಲಿಸಿಕೊಂಡಿದ್ದಾನೆ. ಇದನ್ನ ಸ್ವತಃ ಜಾಕ್ವೆಲಿನ್ ವೀಡಿಯೋ ಮಾಡಿದ್ದು, ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.

ಅಷ್ಟಕ್ಕೂ ಆಗಿದ್ದು ಇಷ್ಟೆ. ಅದಾಗಲೇ ಒಂದು ಕಾರ್ಯಕ್ರಮ ಮುಗಿಸಿ ವರಣ್ ಮತ್ತು ಜಾಕ್ವೆಲಿನ್, ಅಂಬಾನಿ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹೋಗ್ತಿದ್ರು. ಈ ವೇಳೆ ಡ್ರೆಸ್ ಚೇಂಜ್ ಮಾಡೋಕು ಟೈಮ್ ಇಲ್ದೆ ಜಾಕ್ವೆಲಿನ್ ಕಾರಲ್ಲೇ ವರುಣ್ ಡ್ರೆಸ್ ಚೇಂಜ್ ಮಾಡಿಕೊಳ್ಳೊಕೆ ಮುಂದಾಗಿದ್ದಾನೆ. ಆಗ ಜಾಕ್ವೆಲಿನ್ಗೆ ಒಂದು ತುಂಟ ಐಡಿಯಾ ಬಂದಿದೆ. ಅದೇನು ಅಂದ್ರೆ ವರುಣ್ ಬಟ್ಟೆ ಬದಲಿಸೋದನ್ನ ವೀಡಿಯೋ ಮಾಡೋ ಐಡಿಯಾ. ವರುಣ್ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತು ಬಟ್ಟೆ ಬಿಚ್ಚಿ, ಟೀ ಶರ್ಟ್, ಜೀನ್ಸ್ ಪ್ಯಾಂಟ್ ಹಾಕಿಕೊಳ್ಳೊದನ್ನ ಜಾಕ್ವೆಲಿನ್ ವೀಡಿಯೋ ಮಾಡಿದ್ದಾಳೆ.

ಯಾರೋ ಈ ಫನ್ನಿ ವೀಡಿಯೋವನ್ನ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋ ವೈರಲ್ಲಾಗಿದೆ. ಇನ್ನು ವರುಣ್ ಧವನ್ ದ್ವಿಪಾತ್ರದಲ್ಲಿ, ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಮಿಂಚಿರೋ ಜುದ್ವಾ -2 ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಸಲ್ಮಾನ್ ಖಾನ್ ಅಭಿನಯದ ಜುದ್ವಾ ಚಿತ್ರದ ಕಥೆಯನ್ನ ಕೊಂಷ ಬದಲಿಸಿಕೊಂಡು ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವನ್ನ ಕಟ್ಟಿಕೊಡಲಾಗಿದೆ

One thought on “ಕಾರಿನಲ್ಲೇ ಬಟ್ಟೆ ಬದಲಿಸಿದ ಹೀರೋ..ವೀಡಿಯೋ ಮಾಡಿದ ಹೀರೋಯಿನ್

  • October 20, 2017 at 9:27 PM
    Permalink

    Never move an excellent such as a income tax reimburse perfectly into a harmful point enjoy credit break-ins.

Comments are closed.

Social Media Auto Publish Powered By : XYZScripts.com