ಕರ್ನಾಟಕದಲ್ಲಿ ಮತ್ತೊಬ್ಬ ಕಳ್ಳ ಬಾಬಾ : ಯುವತಿ ಮೇಲೆ ಅತ್ಯಾಚಾರ ಮಾಡಿ ಎಸ್ಕೇಪ್‌

ಪಣಜಿ : ದಿನೇ ದಿನೇ ಕಳ್ಳ ಬಾಬಾಗಳ ಹಾವಳಿ ಹೆಚ್ಚುತ್ತಿದೆ. ಈ ಬಾರಿ ಗೋವಾದ 19 ವರ್ಷದ ಯುವತಿಯೊಬ್ಬಳು ಕರ್ನಾಟಕದ ಕಳ್ಳ ಬಾಬಾನ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಬಾನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಯುವತಿ ಮೂಲತಃ ಗೋವಾದ ಸಿಂಧುದುರ್ಗ್‌ ಪ್ರದೇಶದವರಾಗಿದ್ದು, ಗೋವಾದ ವಾಸ್ಕೋದಲ್ಲಿ ನೆಲೆಸಿದ್ದಾರೆ. ಕರ್ನಾಟಕದ ನಿಪ್ಪಾಣಿಯಲ್ಲಿರುವ ಸಂತೋಷ್‌ ಕುಂಬಾರ್‌ ಎಂಬಾತ ಯುವತಿಗೆ ಪರಿಚಯವಿದ್ದು ಯುವತಿಯನ್ನು ಡ್ರಾಪ್‌ ಮಾಡುವುದಾಗಿ ಹೇಳಿ ಕರೆದುಕೊಂಡು ಹೋಗಿ, ಬಳಿಕ ಜ್ಯೂಸ್‌ ನೀಡಿದ್ದಾನೆ. ಆ ಜ್ಯೂಸ್‌ನಲ್ಲಿ ಡ್ರಗ್ಸ್‌ ಹಾಕಿ ಆಕೆಗೆ ನೀಡಿದ್ದು, ಆಕೆ ಪ್ರಜ್ಞೆ ತಪ್ಪಿದ ಬಳಿಕ ಮಾಪುಸ ಪ್ರದೇಶದ ಮನೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಆ ಮನೆಗೆ ಕುಂದಾಪುರ ಮೂಲದ ಸ್ವಾಮೀಜಿಯೊಬ್ಬ ಬಂದು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ ಈ ವಿಷಯವನ್ನು ಹೊರಗೆಲ್ಲಾದರೂ ಬಾಯಿ ಬಿಟ್ಟರೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿದ್ದಾಗಿ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

 

ಸದ್ಯ ಪೊಲೀಸರು ಕಳ್ಳ ಸ್ವಾಮೀಜಿ ವಿರುದ್ದ ಅತ್ಯಾಚಾರ ಸೇರಿದಂತೆ ಅನೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಈಗಾಗಲೆ ಗೋವಾ ಪೊಲೀಸರ ಒಂದು ತಂಡ ಕರ್ನಾಟಕಕ್ಕೆ ಆಗಮಿಸಿದ್ದು, ಸ್ವಾಮೀಜಿಗಾಗಿ ಹುಡುಕಾಟ ನಡೆಸಿದ್ದಾರೆ.

 

 

Comments are closed.

Social Media Auto Publish Powered By : XYZScripts.com